ಸಂಗ್ರಹ ಚಿತ್ರ
ವಿದೇಶ
ಸಿರಿಯಾದಲ್ಲಿ ರಷ್ಯಾ ಕಾರ್ಗೋ ವಿಮಾನ ಪತನ: 32 ಮಂದಿ ದುರ್ಮರಣ
ಸಿರಿಯಾದ ರಷ್ಯಾ ಏರ್ ಬೇಸ್ ಟೆಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ರಷ್ಯಾದ ಕಾರ್ಗೋ ವಿಮಾನ ಪತನವಾಗಿದ್ದು 32 ಪ್ರಯಾಣಿಕರು ದುರ್ಮರಣ ಹೊಂದಿದ್ದಾರೆ...
ಬೈರುತ್: ಸಿರಿಯಾದ ರಷ್ಯಾ ಏರ್ ಬೇಸ್ ಟೆಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ರಷ್ಯಾದ ಕಾರ್ಗೋ ವಿಮಾನ ಪತನವಾಗಿದ್ದು 32 ಪ್ರಯಾಣಿಕರು ದುರ್ಮರಣ ಹೊಂದಿದ್ದಾರೆ.
ರಷ್ಯಾದ ಕಾರ್ಗೋ ವಿಮಾನ ಎಎನ್ 26 ವಿಮಾನದಲ್ಲಿ 6 ಮಂದಿ ವಿಮಾನ ಸಿಬ್ಬಂದಿ ಹಾಗೂ 26 ಪ್ರಯಾಣಿಕರು ಮೃತಪಟ್ಟಿದ್ದಾರೆ. ಇನ್ನು ತಾಂತ್ರಿಕ ದೋಷದಿಂದ ವಿಮಾನ ಪತನವಾಗಿರುವುದಾಗಿ ರಕ್ಷಣಾ ಇಲಾಖೆ ಹೇಳಿದೆ.
ರಷ್ಯಾ ಸಿರಿಯಾದ ಅಧ್ಯಕ್ಷ ಬಶರ್ ಅಸ್ಸಾದ್ ಅವರ ಪ್ರಮುಖ ಮಿತ್ರವಾಗಿದ್ದು ಸಿರಿಯಾದಲ್ಲಿನ ಭಯೋತ್ಪಾದಕ ಉಗ್ರ ಸಂಘಟನೆಗಳ ವಿರುದ್ಧ ರಷ್ಯಾ ವೈಮಾನಿಕ ದಾಳಿಗಳನ್ನು ನಡೆಯುತ್ತಿದೆ. ಇದಕ್ಕಾಗಿ ಮೆಡಿಟರೇನಿಯನ್ ಕರಾವಳಿ ತೀರದಲ್ಲಿ ರಷ್ಯಾ ಏರ್ ಬೇಸ್ ಹೊಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ