ರಾಯಭಾರಿ ಕಚೇರಿ ಉದ್ಘಾಟನೆಗೆ ಜೆರುಸಲೇಮ್ ಗೆ ತೆರಳಲಿರುವ ಡೊನಾಲ್ಡ್ ಟ್ರಂಪ್

ಇಸ್ರೇಲ್ ನ ಟೆಲ್‌ಅವೀವ್‌ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯನ್ನು ಜೆರುಸಲೇಮ್ ಗೆ ಸ್ಥಳಾಂತರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ನೂತನ ರಾಯಭಾರಿ ಕಚೇರಿ ಉದ್ಘಾಟನೆಗೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್..
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ ಟನ್: ಇಸ್ರೇಲ್ ನ ಟೆಲ್‌ಅವೀವ್‌ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯನ್ನು ಜೆರುಸಲೇಮ್ ಗೆ ಸ್ಥಳಾಂತರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ನೂತನ ರಾಯಭಾರಿ ಕಚೇರಿ ಉದ್ಘಾಟನೆಗೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೆರುಸಲೇಮ್ ಗೆ ತೆರಳುವ ಸಾಧ್ಯತೆ ಇದೆ. 
ರಾಯಭಾರಿ ಕಚೇರಿ ಉದ್ಘಾಟನೆಗೆ ಜೆರುಸಲೇಮ್ ಗೆ ಬರುವುದಕ್ಕೆ ಯತ್ನಿಸುತ್ತೇನೆ, ಸಾಧ್ಯವಾದರೆ ಕಾರ್ಯಕ್ರಮದಲ್ಲಿ ಖುದ್ದು ಪಾಲ್ಗೊಳ್ಳುವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರನ್ನು ಭೇಟಿ ಮಾಡಿರುವ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 
ಮೇ ತಿಂಗಳಲ್ಲಿ ನೂತನ ರಾಯಭಾರಿ ಕಚೇರಿ ಉದ್ಘಾಟನೆಯಾಗಲಿದ್ದು, ಅಮೆರಿಕ ಅಧ್ಯಕ್ಷರು ಮೇ ತಿಂಗಳಲ್ಲಿ ಅಥವಾ ಅದಕ್ಕೂ ಮುನ್ನ ಭೇಟಿ ನೀಡುವ ಸೂಚನೆ ನೀಡಿದ್ದಾರೆ. ಇಸ್ರೇಲ್ ನಲ್ಲಿ ರಾಯಭಾರಿ ಕಚೇರಿಯನ್ನು ನಿರ್ಮಾಣ ಮಾಡುವುದಕ್ಕಾಗಿ ಅಮೆರಿಕ ಆಡಳಿತ ಬರೊಬ್ಬರಿ ಒಂದು ಬಿಲಿಯನ್ ಡಾಲರ್ ಗೆ ಬೇಡಿಕೆ ಇಟ್ಟಿತ್ತು. ಆದರೆ ಅದನ್ನು ನಾವು $250,000 ಗೆ ಪೂರ್ಣಗೊಳಿಸುವುದಾಗಿ ಹೇಳಿದ್ದೇನೆ ಎಂದು ಟ್ರಂಪ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com