ಸ್ಟೀಫನ್ ಹಾಕಿಂಗ್ಸ್
ವಿದೇಶ
ಕೃತಕ ಬುದ್ಧಿಮತ್ತೆ ಮನುಕುಲಕ್ಕೆ ಮಾರಕ ಎಂದಿದ್ದರು ಸ್ಟೀಫನ್ ಹಾಕಿಂಗ್
ದಿನದಿಂದ ದಿನಕ್ಕೆ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದು ಈ ಬಗ್ಗೆ ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಸದಾ ಎಚ್ಚರಿಕೆ ನೀಡುತ್ತಲೇ ಇದ್ದರು.
ಲಂಡನ್: ವಿಜ್ಞಾನಿಗಳೆಂದರೆ ಆಧುನಿಕ ಆವಿಷ್ಕಾರವನ್ನು ಸಾಮಾನ್ಯವಾಗಿ ಬೆಂಬಲಿಸುತ್ತಾರೆ ಎಂಬ ಅಭಿಪ್ರಾಯವಿದೆ. ಆದರೆ ದಿನದಿಂದ ದಿನಕ್ಕೆ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದು ಈ ಬಗ್ಗೆ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಸದಾ ಎಚ್ಚರಿಕೆ ನೀಡುತ್ತಲೇ ಇದ್ದರು.
ಕೃತಕ ಬುದ್ಧಿಮತ್ತೆ ಬಗ್ಗೆ ಮಾತನಾಡಿದಾಗಲೆಲ್ಲಾ ಎಚ್ಚರಿಕೆ ನೀಡುತ್ತಿದ್ದ ಸ್ಟೀಫನ್ ಹಾಕಿಂಗ್ಸ್, ಕೃತಕ ಬುದ್ಧಿಮತ್ತೆಯ ಪ್ರಾಬಲ್ಯ ಹೆಚ್ಚಿದಂತೆಲ್ಲಾ ಅದು ಮನುಕುಲಕ್ಕೆ ಮಾರಕ ಎಂಬುದು ಸ್ಟೀಫನ್ ಹಾಕಿಂಗ್ಸ್ ನ ಸ್ಪಷ್ಟ ಅಭಿಪ್ರಾಯವಾಗಿತ್ತು.
ಕೃತಕ ಬುದ್ಧಿಮತ್ತೆ ಮನುಷ್ಯತ್ವವನ್ನೇ ಬುಡಮೇಲು ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದ ಸ್ಟೀಫನ್ ಹಾಕಿಂಗ್, ಕೃತಕ ಬುದ್ಧಿಮತ್ತೆಯ ಪ್ರಬಾಲ್ಯ ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಯಂತ್ರಗಳು ಮಾನವನಿಗಿಂತ ಹೆಚ್ಚು ಪ್ರಬಲವಾಗಿರಲಿವೆ ಎಂದು ಎಚ್ಚರಿಸಿದ್ದರು.
ಕೃತಕ ಬುದ್ಧಿಮತ್ತೆಯ ಉಪಯೋಗ ಮಾನವೀಯತೆಗೆ ಮಾರಕವಾಗದಂತೆ ಬಳಕೆಯಾಗಬೇಕು, ಭೂಮಿ ನಮಗೆ ತುಂಬಾ ಚಿಕ್ಕದಾಗುತ್ತಿದೆ, ಜಾಗತಿಕ ಜನಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದ್ದು ಸ್ವಯಂ ನಾಶದತ್ತ ಮನುಕುಲ ಹೆಜ್ಜೆ ಇಡುತ್ತಿದ್ದು, ಕೃತಕ ಬುದ್ಧಿಮತ್ತೆ ಎಂಬುದು ಮನುಕುಲದ ಇತಿಹಾಸದಲ್ಲೇ ಅತ್ಯದ್ಭುತ ಅಥವಾ ಅತ್ಯಂತ ಅಪಾಯಕಾರಿ ಆವಿಷ್ಕಾರವಾಗಿರಲಿದೆ ಎಂದು ಅಭಿಪ್ರಾಯಪಟ್ಟಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ