ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಇನ್ನಿಲ್ಲ

ಭೌತವಿಜ್ಞಾನಿ ಪ್ರೊ. ಸ್ಟೀಫನ್‌ ಹಾಕಿಂಗ್‌ (76) ವಿಧಿವಶರಾಗಿದ್ದಾರೆ. ಹಾಕಿಂಗ್ ಅವರ ಮಕ್ಕಳಾದ ಲೂಸಿ, ರಾಬರ್ಟ್, ಮತ್ತು ಟಿಮ್, ನಿಧನದ ಬಗ್ಗೆ ಪ್ರಕಟಣೆ ನೀಡಿದ್ದಾರೆ..
ಸ್ಟೀಫನ್ ಹಾಕಿಂಗ್
ಸ್ಟೀಫನ್ ಹಾಕಿಂಗ್
Updated on
ಲಂಡನ್ : ಭೌತವಿಜ್ಞಾನಿ ಪ್ರೊ. ಸ್ಟೀಫನ್‌ ಹಾಕಿಂಗ್‌ (76) ವಿಧಿವಶರಾಗಿದ್ದಾರೆ. ಹಾಕಿನ್ಸ್ ಅವರ ಮಕ್ಕಳಾದ ಲೂಸಿ, ರಾಬರ್ಟ್, ಮತ್ತು ಟಿಮ್, ನಿಧನದ ಬಗ್ಗೆ ಪ್ರಕಟಣೆ ನೀಡಿದ್ದಾರೆ.
ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ ನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಮುಂಜಾನೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
8 ಜನವರಿ 1942ರಲ್ಲಿ ಜನಿಸಿದ್ದ ಸ್ಟೀಫನ್‌ ಅವರು, ಬ್ರಿಟೀಷ್‌ ಸೈದ್ಧಾಂತಿಕ ಭೌತಶಾಸ್ತ್ರಜ್ಞರಾಗಿದ್ದು, 40 ವರ್ಷಗಳ ಸುದೀರ್ಘ ಕಾಲ ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವಪ್ರಸಿದ್ಧಿ ಹೊಂದಿದವರು.
ನಮ್ಮ ಪ್ರೀತಿಪಾತ್ರ ತಂದೆಯನ್ನು ಕಳೆದುಕೊಂಡು ನಾವು ದುಃಖದಲ್ಲಿದ್ದೇವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com