ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಲ್ಯೂಕಾಶಿಯಾದ ಪ್ರಾಧ್ಯಾಪಕರಾಗಿ ಐಸಾಕ್ ನ್ಯೂಟನ್ ನ ಉತ್ತರಾಧಿಕಾರಿಗಳಲ್ಲಿ ಒಬ್ಬರಾಗಿ,ಹಾಕಿಂಗ್ ಗುರುತಿಸಿಕೊಂಡಿದ್ದರು."ಏಕೀಕೃತ ಸಿದ್ಧಾಂತ" ಎಂಬ ಭೌತಶಾಸ್ತ್ರದ ಮಹತ್ವದ ಸಿದ್ದಾಂತವನ್ನು ಬೆಳೆಸುವಲ್ಲಿ ಹಾಕಿಂಗ್ ನಿರತರಾಗಿದ್ದರು. ಈ ಸಿದ್ದಾಂತವು ಐನ್ಸ್ಟೈನ್ ಸಾಪೇಕ್ಷತೆ ಸಿದ್ಧಾಂತದ ವಿರೋಧಾಭಾಸವನ್ನು ಪರಿಹರಿಸುತ್ತದೆ, ಗ್ರಹಗಳಂತಹ ದೊಡ್ಡ ವಸ್ತುಗಳ ಚಲನೆಯನ್ನು ನಿಯಂತ್ರಿಸುವ ಗುರುತ್ವಾಕರ್ಷಣೆಯ ನಿಯಮಗಳನ್ನು ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್ ಸಿದ್ಧಾಂತವನ್ನು ವಿವರಿಸುವ ಈ ತತ್ವವು ಹಾಕಿಂಗ್ ಅವರ ಮಹತ್ವದ ಕೊಡುಗೆಯಾಗಿದೆ.