''ವಿ ಆರ್ ಸಿಖ್''ಅಭಿಯಾನಕ್ಕೆ ಅಮೆರಿಕಾದ ಅತ್ಯುನ್ನತ ಗೌರವ

ದೇಶದಲ್ಲಿರುವ ಸಿಖ್ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಜಾಗೃತಿ ಮೂಡಿಸಲು ಸಿಖ್ ಜನಾಂಗಗವರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ದೇಶದಲ್ಲಿರುವ ಸಿಖ್ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಜಾಗೃತಿ ಮೂಡಿಸಲು ಸಿಖ್ ಜನಾಂಗಗವರು ಅಮೆರಿಕಾದ್ಯಂತ ಆರಂಭಿಸಿರುವ ಅಭಿಯಾನಕ್ಕೆ. ಸಾರ್ವಜನಿಕ ಉದ್ದೇಶವನ್ನು ಪ್ರಚಾರಮಾಡುವ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದಲ್ಲಿ ಅಮೆರಿಕಾದ ಅತ್ಯುನ್ನತ ಪ್ರಶಸ್ತಿ ಲಭಿಸಿದೆ.

ನಾವು ಸಿಖ್ ಜನಾಂಗದವರು ಎಂಬ ಜಾಹಿರಾತು ಅಭಿಯಾನವನ್ನು ಸರ್ಕಾರೇತರ ಸಂಘಟನೆ ರಾಷ್ಟ್ರೀಯ ಸಿಖ್ ಅಭಿಯಾನ ಕೈಗೊಂಡಿದ್ದು, ಈ ಮೂಲಕ ಅಮೆರಿಕನ್ನರಿಗೆ ತಮ್ಮ ಜನಾಂಗದ ಬಗ್ಗೆ ಮಾಹಿತಿ ನೀಡುವುದಾಗಿದೆ. ಅಲ್ಲಿ ಸಿಖ್ ಅಲ್ಪಸಂಖ್ಯಾತರ ಮೇಲೆ ದ್ವೇಷ ಅಪರಾಧಗಳು ಹೆಚ್ಚಾಗುತ್ತಿರುವುದರ ವಿರುದ್ಧ ಅಭಿಯಾನ ಕೈಗೊಂಡಿದ್ದಾರೆ.

ಎಫ್ ಪಿ1 ಕಾರ್ಯತಂತ್ರ ಮೂಲಕ ಅಭಿಯಾನವನ್ನು ಪ್ರಚುರಪಡಿಸಲಾಗಿದ್ದು ಸಿಖ್ ಜನರು ನೆರೆಹೊರೆಯವರಿಂದ ಮತ್ತು ಅಮೆರಿಕನ್ನರಿಂದ ತಾರತಮ್ಯ ಎದುರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
 
ಈ ಅಭಿಯಾನಕ್ಕೆ 2018 ಪಿಆರ್ ವೀಕ್ ಯುಎಸ್ ಅವಾರ್ಡ್ ಪ್ರಶಸ್ತಿ ಸಿಕ್ಕಿದೆ. ಸಾರ್ವಜನಿಕ ಸಂಪರ್ಕದ ಉದ್ಯಮದ ಆಸ್ಕರ್ಸ್ ಎಂಬ ಸಾರ್ವಜನಿಕ ಸದುದ್ದೇಶ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ.

ಇದು ಅಮೆರಿಕಾದಲ್ಲಿರುವ ಸಿಖ್ ಸಮುದಾಯದವರಿಗೆ ಸಿಕ್ಕಿರುವ ಅತಿದೊಡ್ಡ ಜಯ. ಈ ಅಭಿಯಾನವನ್ನು ಯಶಸ್ಸುಗೊಳಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಸಿಖ್ ಸಮುದಾಯದ ಒಕ್ಕೂಟದ ಸಹ ಸಂಸ್ಥಾಪಕ ರಾಜವಂತ್ ಸಿಂಗ್ ತಿಳಿಸಿದ್ದಾರೆ.

ನಮ್ಮ ನಂಬಿಕೆ ಮತ್ತು ಮೌಲ್ಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಇಲ್ಲಿನ ಅಸಂಖ್ಯಾತ ಸಿಖ್ ರು ಬೆದರಿಕೆ, ತಾರತಮ್ಯ ಮತ್ತು ದ್ವೇಷದ ಅಪರಾಧಗಳನ್ನು ಎದುರಿಸಬೇಕಾಗಿ ಬಂದಿದೆ. ಸಿಖ್ ರ ಈ ಅಭಿಯಾನಕ್ಕಾಗಿ ಸುಮಾರು 1.3 ದಶಲಕ್ಷ ಅಮೆರಿಕನ್ ಡಾಲರ್ ನ್ನು ಖರ್ಚು ಮಾಡಲಾಗಿದೆ, ಅದರಲ್ಲಿ ಹಿಂದೂಗಳು ಕೂಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com