ವಿಜಯ್ ಮಲ್ಯ, ಪಿಂಕಿ ಲಾಲ್ವಾನಿ
ವಿದೇಶ
ಮಾಜಿ ಗಗನಸಖಿಯೊಡನೆ ಮೂರನೇ ವಿವಾಹಕ್ಕೆ ವಿಜಯ್ ಮಲ್ಯ ಸಿದ್ದತೆ?
ಮದ್ಯದ ದೊರೆ, ವಿಜಯ್‌ಮಲ್ಯ ಮೂರನೇಯ ಮದುವೆ ತಯಾರಿಯಲ್ಲಿದ್ದಾರೆ!
ಲಂಡನ್: ಮದ್ಯದ ದೊರೆ, ವಿಜಯ್‌ಮಲ್ಯ ಮೂರನೇಯ ಮದುವೆ ತಯಾರಿಯಲ್ಲಿದ್ದಾರೆ! ವಿವಿಧ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲಪಡೆದು ವಿದೇಶಕ್ಕೆ ಪರಾರಿಯಾಗಿರುವ ವಿಜಯ್‌ಮಲ್ಯ ಶೀಘ್ರದಲ್ಲಿಯೇ ಮಾಜಿ ಗಗನಸಖಿ, ಗೆಳತಿ ಪಿಂಕಿ ಲಾಲ್ವಾನಿ ಅವರನ್ನು ವಿವಾಹವಾಗಲಿದ್ದಾರೆ ಎಂದು ಮಾದ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ.
ಕಿಂಗ್ ಫಿಷರ್ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿದ್ದ ಪಿಂಕಿ ಲಾಲ್ವಾನಿ ಜತೆ ಸಂಬಂಧ ಇರಿಸಿಕೊಂಡಿದ್ದ ಮಲ್ಯ ಅವರನ್ನು ತನ್ನ ಮೂರನೇ ಪತ್ನಿಯನ್ನಾಗಿ ಸ್ವೀಕರಿಸುವ ತಯಾರಿಯಲ್ಲಿದ್ದಾರೆ.
ವಿಜಯ್‌ಮಲ್ಯ ಇದಾಗಲೇ ಎರಡು ಬಾರಿ ವಿವಾಹವಾಗಿದ್ದಾರೆ. ಸಮೀರಾ ತಯ್ಯಬ್ಜೀ ಹಾಗೂ ರೇಖಾ ಮಲ್ಯ ಅವರ ಇಬ್ಬರು ಪತ್ನಿಯರು. 1993ರಲ್ಲಿ ರೇಖಾ ಮಲ್ಯ ಅವರೊಡನೆ ವಿವಾಹವಾಗಿದ್ದ ವಿಜಯ್‌ಮಲ್ಯ ಅವರಿಗೆ ಸಿದ್ದಾರ್ಥ್, ಲಿಯೆನ್ನಾ ಹಾಗೂ ತಾನ್ಯಾ ಸೇರಿ ಮೂರು ಮಕ್ಕಳಿದ್ದಾರೆ.
2011ರಲ್ಲಿ ಕಿಂಗ್ ಫಿಶರ್ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿ ಸೇರಿದ್ದ ಪಿಂಕಿ ಜತೆಗೆ ಮಲ್ಯ ಗೆಳೆತನ ಬೆಳೆಸಿದ್ದರು. ಕೆಲ ಸಮಯದಿಂದ ಇಬ್ಬರು ಜತೆಯಾಗಿ ಹಲವು ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೆಂದು ಮಾದ್ಯಮಗಳು ವರದಿ ಮಾಡಿವೆ.
ಮಲ್ಯ ತಾನು ಕಷ್ಟದಲ್ಲಿದ್ದಾಗ ಪಿಂಕಿ ಅವರಿಗೆ ಸಾಥ್ ನೀಡಿದ್ದಳು, ಲಂಡನ್ ನಲ್ಲಿ ಗಡಿಪಾರು ಪ್ರಕರಣದ ವಿಚಾರಣೆ ಸಮಯದಲ್ಲಿ ವಿಜಯ್‌ಮಲ್ಯ ಜತೆಗೆ ಪಿಂಕಿ ಸಹ ಹಾಜರಿದ್ದರೆಂದು ವರದಿಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ