ಪಾಕಿಸ್ತಾನದಲ್ಲಿ ಹೆಣ್ಣು ಭ್ರೂಣ ಹತ್ಯೆ : ಕಸದ ರಾಶಿಯಲ್ಲಿ ಬಿದಿದ್ದ ನೂರಾರು ಮೃತದೇಹ ವಶ

ಪಾಕಿಸ್ತಾನದ ರಾಜಧಾನಿ ಕರಾಚಿಯಲ್ಲಿ ಗಂಡು ಮಕ್ಕಳಿಗೆ ಆದ್ಯತೆ ನೀಡುವ ಸಂಸ್ಕೃತಿ ಆಳವಾಗಿ ಬೇರೂರಿದ್ದು, ಕಳೆದ ಕೆಲ ತಿಂಗಳ ಹಿಂದೆ ಕಸದ ರಾಶಿಯಲ್ಲಿ ಬಿದ್ದಿದ್ದ ನೂರಾರು ಹೆಣ್ಣು ಭ್ರೂಣಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕರಾಚಿ : ಪಾಕಿಸ್ತಾನದ ರಾಜಧಾನಿ ಕರಾಚಿಯಲ್ಲಿ ಗಂಡು ಮಕ್ಕಳಿಗೆ ಆದ್ಯತೆ ನೀಡುವ ಸಂಸ್ಕೃತಿ  ಆಳವಾಗಿ ಬೇರೂರಿದ್ದು, ಕಳೆದ  ಕೆಲ ತಿಂಗಳ ಹಿಂದೆ  ಕಸದ ರಾಶಿಯಲ್ಲಿ ಬಿದ್ದಿದ್ದ ನೂರಾರು ಹೆಣ್ಣು ಭ್ರೂಣಗಳ ಮೃತದೇಹಗಳನ್ನು   ವಶಪಡಿಸಿಕೊಳ್ಳಲಾಗಿದೆ.

2017 ಜನವರಿಯಿಂದ ಏಪ್ರಿಲ್ ತಿಂಗಳವರೆಗೂ ಇದಿ ಪೌಂಡೇಷನ್ ಮತ್ತು ಚ್ಚಿಪಾ ಕಲ್ಯಾಣ ಸಂಸ್ಥೆಯಿಂದ  ಕಸದ ರಾಶಿಯಲ್ಲಿ ಬಿದ್ದಿದ್ದ 345 ಭ್ರೂಣಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳಲ್ಲಿ ಶೇ.99  ರಷ್ಟು ಎಲ್ಲಾ ಹೆಣ್ಣು ಭ್ರೂಣಗಳೇ ಆಗಿವೆ ಎಂದು ದಿ ನ್ಯೂ ಇಂಟರ್ ನ್ಯಾಷನಲ್ ವರದಿ ಮಾಡಿದೆ.

ಫೆಬ್ರವರಿ ತಿಂಗಳಲ್ಲಿ ಕರಾಚಿಯಲ್ಲಿ 4 ದಿನಗಳ ಹೆಣ್ಣು ಮಗುವಿನ ಮೃತದೇಹವನ್ನು ಇದಿ ಪೌಂಡೇಷನ್ ಪತ್ತೆ ಹಚ್ಚಿದೆ.  ಕರಾಚಿಯದ್ಯಾಂತ  ಇಂತಹ 93 ಪ್ರಕರಣಗಳನ್ನು ಪತ್ತೆ ಹಚ್ಚಿಸಲಾಗಿದೆ  ಎಂದು ಚ್ಚಿಪ ಕಲ್ಯಾಣ ಸಮಿತಿ ತಿಳಿಸಿದೆ.

ಮತ್ತೊಂದು ಪ್ರಕರಣದಲ್ಲಿ ಕಲ್ಲಿನಿಂದ ಜಜ್ಜಿ ಅಮಾನವೀಯವಾಗಿ ಮಗವನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಚರ್ಚಿನ ಪಾದ್ರಿಯಬ್ಬರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ವಿಚಾರಣೆಯನ್ನು ಪೊಲೀಸರು ಸರಿಯಾಗಿ ನಡೆಸುತ್ತಿಲ್ಲ.  ಇಂತಹ ಹೀನಕೃತ್ಯ ನಡೆಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇತ್ತೀಚಿನ ಸರ್ವೆಯೊಂದರ ಪ್ರಕಾರ ಹೆಣ್ಣು ಮಕ್ಕಳಿಗಿಂತಲೂ ಗಂಡು ಮಕ್ಕಳ ಸಂತಾನಕ್ಕೆ ಜನರು ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com