ಲಾಹೋರ್ ನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಣಿಶಂಕರ್ ಅಯ್ಯರ್!

ಗುಜರಾತ್ ವಿಧಾನಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿ ಕಾಂಗ್ರೆ ಸ್ ನಿಂದ ಅಮಾನತ್ತುಗೊಂಡಿದ್ದ ಮಣಿಶಂಕರ್ ಅಯ್ಯರ್ ಈಗ ಕರ್ನಾಟಕ ಚುನಾವಣೆ ವೇಳೆ
ಮಣಿಶಂಕರ್ ಅಯ್ಯರ್
ಮಣಿಶಂಕರ್ ಅಯ್ಯರ್
ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿ ಕಾಂಗ್ರೆ ಸ್ ನಿಂದ ಅಮಾನತ್ತುಗೊಂಡಿದ್ದ ಮಣಿಶಂಕರ್ ಅಯ್ಯರ್ ಈಗ ಕರ್ನಾಟಕ ಚುನಾವಣೆ ವೇಳೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 
ಲಾಹೋರ್ ನಲ್ಲಿ ಮಾತನಾಡಿರುವ ಮಣಿಶಂಕರ್ ಅಯ್ಯರ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಹಿಂದುತ್ವವನ್ನು ಬೆಂಬಲಿಸುತ್ತಿರುವುದಕ್ಕೆ ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.   ಭಾರತದಲ್ಲಿ ಪ್ರಸ್ತುತ ವಿಚಿತ್ರವಾದ ಪರಿಸ್ಥಿತಿ ಇದೆ. 1923 ರಲ್ಲಿ ವಿನಾಯಕ್ ದಾಮೋದರ್ ಸಾವರ್ಕರ್ ಎಂಬ ವ್ಯಕ್ತಿ ಧಾರ್ಮಿಕ ಗ್ರಂಥಗಳಲ್ಲಿ ಇಲ್ಲದೇ ಇರುವ ಹಿಂದುತ್ವ ಎಂಬ ಪದವನ್ನು ಕಂಡುಹಿಡಿದರು. ಹೀಗಾಗಿ ಅಂದಿನ ಭಾರತ ಎರಡು ರಾಷ್ಟ್ರದ ಪ್ರಸ್ತಾವನೆಯನ್ನು ಈಗ ಅಧಿಕಾರದಲ್ಲಿರುವ ಬಿಜೆಪಿಯವರ ಗುರು ಸಾವರ್ಕರ್ ಅವರೇ ಪ್ರತಿಪಾದಿಸಿದ್ದು ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. 
ಅಷ್ಟೇ ಅಲ್ಲದೇ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಹೊಗಳಿದ್ದಕ್ಕೆ ಭಾರತದಲ್ಲಿ ಉಂಟಾದ ಆಕ್ಷೇಪಕ್ಕೂ ಪಾಕಿಸ್ತಾನದ್ಲಲೇ ಪ್ರತಿಕ್ರಿಯೆ ನೀಡಿರುವ ಅಯ್ಯರ್, ಹಲವು ಪಾಕಿಸ್ತಾನಿಯರು ಗಾಂಧಿ ಅವರನ್ನು ಮಹಾತ್ಮಾ ಗಾಂಧಿ ಎಂದು ಕರೆಯುತ್ತಾರೆ, ಹಾಗಾದರೆ ಅವರೆಲ್ಲರೂ ದೇಶಭಕ್ತರಲ್ಲದ ಪಾಕಿಸ್ತಾನಿಯರೇ ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com