ಬ್ರಿಟನ್ ಹೈಕೋರ್ಟ್ ನಲ್ಲಿ ಮಲ್ಯಗೆ ಮತ್ತೆ ಮುಖಭಂಗ!

ಭಾರತೀಯ ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡಬೇಕಿರುವ ವಿಜಯ್ ಮಲ್ಯಗೆ ಬ್ರಿಟನ್ ಹೈಕೋರ್ಟ್ ನಲ್ಲಿ ಮತ್ತೊಮ್ಮೆ ಮುಖಭಂಗ ಉಂಟಾಗಿದೆ.
ವಿಜಯ್ ಮಲ್ಯ
ವಿಜಯ್ ಮಲ್ಯ
ಲಂಡನ್: ಭಾರತೀಯ ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡಬೇಕಿರುವ ವಿಜಯ್ ಮಲ್ಯಗೆ ಬ್ರಿಟನ್ ಹೈಕೋರ್ಟ್ ನಲ್ಲಿ ಮತ್ತೊಮ್ಮೆ ಮುಖಭಂಗ ಉಂಟಾಗಿದೆ. 
9,000 ಕೋಟಿ ರೂಪಾಯಿ ಬ್ಯಾಂಕ್ ಗಳಿಗೆ ಮರುಪಾವತಿ ಮಾಡಬೇಕಿರುವ ವಿಜಯ್ ಮಲ್ಯ ಅವರನ್ನು ವಾಂಟೆಡ್ ವ್ಯಕ್ತಿ ಅಥವಾ ಕಾನೂನಿನಿಂದ ತಲೆಮರೆಸಿಕೊಂಡಿರುವ ಆರೋಪಿ ಎಂಬುದಾಗಿ ಗುರುತಿಸಬಹುದು ಎಂದು ಬ್ರಿಟನ್ ಹೈಕೋರ್ಟ್ ಹೇಳಿದೆ. 
ವಿಜಯ್ ಮಲ್ಯ ಅವರ ಬ್ರಿಟನ್ ನಲ್ಲಿರುವ ಆಸ್ತಿಯನ್ನು ಭಾರತೀಯ ಬ್ಯಾಂಕ್ ಗಳು ಸಾಲಮರುಪಾವತಿ ಮೊತ್ತಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದೆಂದು ಬ್ರಿಟನ್ ಹೈಕೋರ್ಟ್ ನ ನ್ಯಾಯಾಧೀಶರಾದ ಆಂಡ್ರ್ಯೂ ಹೆನ್ಶಾ ತೀರ್ಪು ನೀಡಿದ ಬೆನ್ನಲ್ಲೇ ವಿಜಯ್ ಮಲ್ಯ ಅವರನ್ನು ವಾಂಟೆಡ್ ವ್ಯಕ್ತಿ ಅಥವಾ ಕಾನೂನಿನಿಂದ ತಲೆಮರೆಸಿಕೊಂಡಿರುವ ಆರೋಪಿ ಎಂಬುದಾಗಿ ಗುರುತಿಸಬಹುದು ಎಂದೂ ಹೇಳಿದೆ. ಬ್ರಿಟನ್ ಹೈಕೋರ್ಟ್ ನ ಈ ಹೇಳಿಕೆಯಿಂದ ವಿಜಯ್ ಮಲ್ಯಗೆ ಮತ್ತೊಮ್ಮೆ ಮುಖಭಂಗವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com