ಭಾರತದ ನೆರೆಹೊರೆಯ ರಾಷ್ಟ್ರಗಳ ನೀತಿಯಲ್ಲಿ ನೇಪಾಳಕ್ಕೆ ಮೊದಲ ಸ್ಥಾನ - ಪ್ರಧಾನಿ ನರೇಂದ್ರ ಮೋದಿ

ಭಾರತದ ನೆರೆಹೊರೆಯ ರಾಷ್ಟ್ರಗಳ ನೀತಿಯಲ್ಲಿ ನೇಪಾಳ ಮೊದಲ ಸ್ಥಾನದಲ್ಲಿ ಬರುತ್ತದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಮತ್ತು ನೇಪಾಳ ಪ್ರಧಾನಿ
ಪ್ರಧಾನಿ ನರೇಂದ್ರಮೋದಿ ಮತ್ತು ನೇಪಾಳ ಪ್ರಧಾನಿ
Updated on

ಜನಕಪುರ : ಭಾರತದ ನೆರೆಹೊರೆಯ ರಾಷ್ಟ್ರಗಳ ನೀತಿಯಲ್ಲಿ ನೇಪಾಳ ಮೊದಲ ಸ್ಥಾನದಲ್ಲಿ ಬರುತ್ತದೆ  ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದು, ಪವಿತ್ರ ನಗರವಾಗಿರುವ ಜನಕಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ  ಅಭಿವೃದ್ದಿಗಾಗಿ 100 ಕೋಟಿ ರೂ. ಅನುದಾನ ಒದಗಿಸುವುದಾಗಿ ಹೇಳಿದ್ದಾರೆ.

ಯಾವುದೇ ಸಮಸ್ಯೆ ಉಂಟಾದ್ದರೂ  ಭಾರತ ಹಾಗೂ ನೇಪಾಳ ಒಟ್ಟಾಗಿ ಕಾರ್ಯನಿರ್ವಹಿಸಲಾಗುವುದು ,ಅತ್ಯಂತ ಕಷ್ಟಕರ ಕಾಲದಲ್ಲಿ ನಾವು ಒಬ್ಬರಿಗೊಬ್ಬರು ಇದ್ದೇವೆ "ಎಂದು ಮೋದಿ ಜನಕಪುರದ ನಾಗರಿಕರಿಂದ ಅದ್ದೂರಿ ಸ್ವಾಗತ ಸ್ವೀಕರಿಸಿ ಮಾತನಾಡುತ್ತಿದ್ದರು.

5 ಟಿ- ಅಂದರೆ ಸಂಪ್ರದಾಯ, ವ್ಯಾಪಾರ, ಪ್ರವಾಸೋದ್ಯಮ, ತಂತ್ರಜ್ಞಾನ, ಮತ್ತು ಸಾರಿಗೆ  ಕ್ಷೇತ್ರಗಳಲ್ಲಿ ಪ್ರಗತಿ ಮತ್ತು ಸಮೃದ್ಧಿ ಸಾಧಿಸಲು ಪರಸ್ಪರ ಒಗ್ಗೂಡಿ ಕಾರ್ಯನಿರ್ವಹಿಸಲಾಗುವುದು ಎಂದು ನರೇಂದ್ರಮೋದಿ ಹೇಳಿದರು.

 ಇದಕ್ಕೂ ಮುನ್ನ ಪ್ರಧಾನಿ ನರೇಂದ್ರಮೋದಿ  20 ನೇ ಶತಮಾನದ ಪ್ರಸಿದ್ಧ  ಜಾನಕಿ ದೇವಾಲಯದಲ್ಲಿ ವಿಶೇಷ ಪೂಜೆ  ಸಲ್ಲಿಸಿದರು.  ಜನಕಪುರ ರಾಮನ ಪತ್ನಿ ಸೀತಾದೇವಿಯ ಜನ್ಮ ಸ್ಥಳವಾಗಿದೆ ಎಂಬ ಪ್ರತೀತಿ ಇದೆ.

ಮೈಥಿಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರಮೋದಿ , ರಾಮಾಯಣದ ಪರಿಧಿಯೊಳಗೆ ಜನಕಪುರವನ್ನು ಸೇರಿಸಿರುವುದರಿಂದ ತುಂಬಾ ಸಂತೋಷಪಟ್ಟಿರುವುದಾಗಿ ತಿಳಿಸಿದರು.







Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com