26/11 ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ : ಶರೀಫ್ ಹೇಳಿಕೆ ನಂತರ ಬಿಜೆಪಿ, ಕಾಂಗ್ರೆಸ್ ವಾಗ್ದಾಳಿ

ಮುಂಬೈ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂಬುದನ್ನು ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಶರೀಫ್ ಒಪ್ಪಿಕೊಂಡ ನಂತರ ಬಿಜೆಪಿ ಹಾಗೂ ಕಾಂಗ್ರೆಸ್ ಆ ದೇಶದ ಹಸ್ತಕ್ಷೇಪವನ್ನು ತೀವ್ರವಾಗಿ ಖಂಡಿಸಿವೆ.
ಮುಖ್ತಾರ್  ಅಬ್ಬಾಸ್ ನಖ್ವೀ, ರಾಜೀವ್ ಸಾತವ್,ಹನ್ಸ್ ರಾಜ್ ಗಂಗರಾಮ್
ಮುಖ್ತಾರ್ ಅಬ್ಬಾಸ್ ನಖ್ವೀ, ರಾಜೀವ್ ಸಾತವ್,ಹನ್ಸ್ ರಾಜ್ ಗಂಗರಾಮ್

ನವದೆಹಲಿ: 2008 ನವೆಂಬರ್ 26 ರಂದು ನಡೆದಿದ್ದ ಮುಂಬೈ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ   ಕೈವಾಡವಿದೆ ಎಂಬುದನ್ನು ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಶರೀಫ್ ಒಪ್ಪಿಕೊಂಡ ನಂತರ ಬಿಜೆಪಿ ಹಾಗೂ ಕಾಂಗ್ರೆಸ್   ಆ ದೇಶದ ಹಸ್ತಕ್ಷೇಪವನ್ನು ತೀವ್ರವಾಗಿ ಖಂಡಿಸಿವೆ.

ಈ ದಾಳಿ ಸಂಬಂಧ  ಸಾಕಷ್ಟು ಸಾಕ್ಷ್ಯಧಾರ ಒದಗಿಸಿದ್ದರೂ ಪಾಕಿಸ್ತಾನ ನಿರಾಕರಿಸುತ್ತಾ ಬರಲಾಗಿತ್ತು. ಮುಂಬೈ ಮೇಲಿನ ದಾಳಿಗೆ ಪಾಕಿಸ್ತಾನವೇ ಕಾರಣ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಅಂತಿಮವಾಗಿ ಈ ವಿಷಯವನ್ನು ನವಾಜ್ ಶರೀಫ್ ಒಪ್ಪಿಕೊಂಡಿರುವುದು  ದೊಡ್ಡ ಸುದ್ದಿಯಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವೀ ಹೇಳಿದ್ದಾರೆ.

ಮುಂಬೈ ಮೇಲಿನ ದಾಳಿಗೆ ಪಾಕಿಸ್ತಾನವೇ ಕಾರಣವಾಗಿದ್ದು, ಭಯೋತ್ಪಾದನೆ ನಿರ್ಮೂಲನೆಯಲ್ಲಿ ಪಾಕಿಸ್ತಾನಕ್ಕೆ ಸಹಕಾರ ನೀಡಲು ಕೇಂದ್ರಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯಸಚಿವ ಹನ್ಸ್ ರಾಜ್ ಗಂಗರಾಮ್ ಅಹಿರ್ ಹೇಳಿದ್ದಾರೆ.

 ಈ ಮಧ್ಯೆ  ಪಾಕಿಸ್ತಾನದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಇದು ಸರಿಯಾದ ಸಮಯವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಜೀವ್ ಸಾತವ್ ಒತ್ತಾಯಿಸಿದ್ದಾರೆ

. ಈ ದಾಳಿ ಹಿಂದೆ ಪಾಕಿಸ್ತಾನದ ಕೈವಾಡವಿರುವುದಾಗಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್  ಹೇಳಿದ್ದರು.  ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನ ಸರ್ಕಾರದೊಂದಿಗೆ ಕಠಿಣ ನಿಲುವು ತಾಳಿದ್ದರು. ಇದೊಂದು ಗಂಭೀರವಾದ ವಿಷಯವಾಗಿದ್ದು, ಆ  ರಾಷ್ಟ್ರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com