ಆಫ್ಘಾನಿಸ್ತಾನ: ಬಾಂಬ್ ನಿಷ್ಕ್ರಿಯ ವೇಳೆ ಸ್ಫೋಟ; 16 ಸಾವು

ಮಿನಿವ್ಯಾನ್ ನಲ್ಲಿನ ಬಾಂಬ್ ಅನ್ನು ಭದ್ರತಾ ಪಡೆ ಯೋಧರು ನಿಷ್ಕ್ರಿಯಗೊಳಿಸುವಾಗ ಸಂಭವಿಸಿದ ಸ್ಫೋಟದಲ್ಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಂದಹಾರ್: ಮಿನಿವ್ಯಾನ್ ನಲ್ಲಿನ ಬಾಂಬ್ ಅನ್ನು ಭದ್ರತಾ ಪಡೆ ಯೋಧರು ನಿಷ್ಕ್ರಿಯಗೊಳಿಸುವಾಗ ಸಂಭವಿಸಿದ ಸ್ಫೋಟದಲ್ಲಿ 16 ಮಂದಿ ಸಾವನ್ನಪ್ಪಿದ್ದು 38ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 
ದಕ್ಷಿಣ ಆಫ್ಘಾನಿಸ್ತಾನದಲ್ಲಿ ಈ ಸ್ಫೋಟ ಸಂಭವಿಸಿದೆ. ಬಸ್ ನಿಲ್ದಾಣದಲ್ಲಿ ಈ ಮಿನಿ ವ್ಯಾನ್ ಇದ್ದಿದ್ದರಿಂದ ಭದ್ರತೆ ಪಡೆ ಮೊದಲಿಗೆ ಅಲ್ಲಿದ್ದ ಜನರನ್ನು ತೆರವುಗೊಳಿಸಿದ್ದರು ಎಂದು ಪ್ರಾಂತೀಯ ಗವರ್ನರ್ ವಕ್ತಾರ ದಾವುದ್ ಅಹಮಾದಿ ಹೇಳಿದ್ದಾರೆ. 
ಭದ್ರತಾ ಪಡೆ ಬಾಂಬ್ ಅನ್ನು ನಿಷ್ಕ್ರೀಯಗೊಳಿಸುವಾಗ ಬಾಂಬ್ ಸ್ಫೋಟಗೊಂಡಿದೆ. ಈ ವೇಳೆ 16 ಮಂದಿ ಸಾವನ್ನಪ್ಪಿದ್ದು 36ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಐವರು ಮಕ್ಕಳು ಸೇರಿದಂತೆ 10 ಭದ್ರತಾ ಪಡೆ ಯೋಧರು ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com