ಮುಂದಿನ ವಾರ ಮೋದಿ ಸಿಂಗಾಪುರಕ್ಕೆ, ಗಾಂಧಿ ಪ್ರತಿಮೆ ಅನಾವರಣ
ವಿದೇಶ
ಮುಂದಿನ ವಾರ ಮೋದಿ ಸಿಂಗಾಪುರಕ್ಕೆ, ಗಾಂಧಿ ಪ್ರತಿಮೆ ಅನಾವರಣ
ಗಾಂಧಿ ಚಿತಾಭಸ್ಮವನ್ನು ನೀರಿನಲ್ಲಿ ತೇಲಿ ಬಿಡುವದಕ್ಕಾಗಿ ಸಿಂಗಾಪುರಕ್ಕೆ ತೆರಳಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಸಿಂಗಾಪುರದ ಕ್ಲಿಫರ್ಡ್ ಪಿಯರ್ನಲ್ಲಿ .....
ಸಿಂಗಾಪುರ: ಗಾಂಧಿ ಚಿತಾಭಸ್ಮವನ್ನು ನೀರಿನಲ್ಲಿ ತೇಲಿ ಬಿಡುವದಕ್ಕಾಗಿ ಸಿಂಗಾಪುರಕ್ಕೆ ತೆರಳಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಸಿಂಗಾಪುರದ ಕ್ಲಿಫರ್ಡ್ ಪಿಯರ್ ನಲ್ಲಿ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
ಮೇ 31ರಿಂದ ಮೂರು ದಿನಗಳ ಕಾಲ ಪ್ರಧಾನಿ ಮೋದಿ ಸಿಂಗಾಪುರ ಪ್ರವಾಸ ಕೈಗೊಳ್ಳಲಿದ್ದಾರೆ.
ಭಾರತದ ವಿವಿಧ ಭಾಗಗಳು ಹಾಗೂ ಸಿಂಗಾಪುರ ಸೇರಿದಂತೆ ವಿಶ್ವದ ನಾನಾ ರಾಷ್ಟ್ರಗಳಿಗೆ ಗಾಂಧಿ ಚಿತಾಭಸ್ಮವನ್ನು 1948ರಲ್ಲಿ ರವಾನಿಸಲಾಗಿತ್ತು.
ಕ್ಲಿಫರ್ಡ್ ಪಿಯರ್ ಸಿಂಗಾಪುರದ ಸಮುದ್ರ ತೀರದಲ್ಲಿನ ಪ್ರಮುಖ ಹೆಗ್ಗುರುತಾಗಿದೆ.ಇದೀಗ ನೂತನವಾಗಿ ನವೀಕರಣಗೊಂಡ ಈ ಸ್ಥಳದಲ್ಲಿ 'ದಿ ಕ್ಲಿಫರ್ಡ್ ಪಿಯರ್' ಎಂಬ ಹೆಸರಿನರೆಸ್ಟೊರೆಂಟ್ ಆಗಿ ಕಾರ್ಯನಿರ್ವಹಿಸುತ್ತಿದೆ, ಫುಲ್ಟನ್ಟನ್ ಬೇ ಹೋಟೆಲ್.,ಆಲಿಕತ್ವದಲ್ಲಿ ಸ್ಥಳೀಯ, ಏಷ್ಯನ್ ಮತ್ತು ಪಾಶ್ಚಾತ್ಯ ಭಕ್ಷ್ಯಗಳನ್ನು ಪ್ರವಾಸಿಗರು ಇಲ್ಲಿ ಸವಿಯಲು ಅವಕಾಶವಿದೆ.
ಜೂನ್ 2 ರಂದು ಅನಾವರಣಗೊಳ್ಳುವ ಗಾಂಧಿ ಪ್ರತಿಮೆ ಎರಡೂ ರಾಷ್ಟ್ರಗಳ ನಡುವೆ ಇದಾಗಲೇ ಇದ್ದಿರುವ ಬಲವಾದ ಸಂಬಧವನ್ನು ಇನ್ನಷ್ಟು ಪುಷ್ಟೀಕರಿಸಲಿದೆ. ಅಂದು ಪ್ರಧಾನಿ ಮೋದಿ ಗಾಂಧಿ ಪ್ರತಿಮೆ ಅನಾವರಣದ ಬಳಿಕ ಸ್ಥಳೀಯ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸುತ್ತಾರೆ
ಅವರು ಭಾರತ ಮತ್ತು ಸಿಂಗಪುರ್ ನಡುವಿನ ಹಳೆಯ ಒಪ್ಪಂದಗಳನ್ನು ಮುನ್ನಲೆಗೆ ತರುವವರಿದ್ದು .ಸೌತ್ ಬ್ರಿಡ್ಜ್ ರಸ್ತೆಯಲ್ಲಿ ಮೂರು ದೇವಾಲಯಗಳಿಗೆ ಭೇಟಿ ಕೊಡಲಿದ್ದಾರೆ. ಈ ದೇವಾಲಯಗಳನ್ನು ಸಿಂಗಾಪುರದಲ್ಲಿ ನೆಲೆಸಿದ ಭಾರತೀಯ ವಲಸಿಗರು ಶತಮಾನಗಳ ಹಿಂದೆ ನಿರ್ಮಿಸಿದ್ದು ಪ್ರಸ್ತುತ ಇದನ್ನು ರಾಷ್ಟ್ರೀಯ ಸ್ಮಾರಕಗಳು ಎಂದು ಪರಿಗಣಿಸಲಾಗಿದೆ.
ಮೋದಿ ತಮ್ಮ ಸಿಂಗಾಪುರ ಪ್ರವಾಸದ ವೇಳೆ ಹೆರಿಟೇಜ್ ಸೆಂಟರ್ ಲಿಟಲ್ ಇಂಡಿಯಾಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಭಾರತೀಯ ಕಲಾವಿದರಿಗಾಗಿ ಶಾಶ್ವತ ವೇದಿಕೆಯೊಂದನ್ನು ಅವರು ಉದ್ಘಾಟಿಸಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ