ಬೆಳಗಾವಿ ಸವಿತಾ ಸಾವಿಗೆ ನ್ಯಾಯ: ಐರ್ಲೆಂಡಿನಲ್ಲಿ ಗರ್ಭಪಾತ ನಿಷೇಧ ಕಾನೂನು ರದ್ದು

ಬೆಳಗಾವಿಯ ದಂತವೈದ್ಯೆ ಸವಿತಾ ಹಾಲಪ್ಪನವರ್ ಸಾವು ಸಂಭವಿಸಿದ ವರ್ಷಗಳ ಬಳಿಕ ಐರ್ಲೆಂಡ್ ಮಹಿಳೆಯರಿಗೆ ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ........
ಬೆಳಗಾವಿ ಸವಿತಾ ಸಾವಿಗೆ ನ್ಯಾಯ: ಐರ್ಲೆಂಡಿನಲ್ಲಿ ಗರ್ಭಪಾತ ನಿಷೇಧ ಕಾನೂನು ರದ್ದು
ಬೆಳಗಾವಿ ಸವಿತಾ ಸಾವಿಗೆ ನ್ಯಾಯ: ಐರ್ಲೆಂಡಿನಲ್ಲಿ ಗರ್ಭಪಾತ ನಿಷೇಧ ಕಾನೂನು ರದ್ದು
ಡಬ್ಲಿನ್‌ ಬೆಳಗಾವಿಯ ದಂತವೈದ್ಯೆ ಸವಿತಾ ಹಾಲಪ್ಪನವರ್ ಸಾವು ಸಂಭವಿಸಿದ ವರ್ಷಗಳ ಬಳಿಕ ಐರ್ಲೆಂಡ್ ಮಹಿಳೆಯರಿಗೆ ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ಅನುಮತಿಸುವ ಕಾನೂನು ಜಾರಿಗೆ  ತರುತ್ತಿದೆ.
ಸಂಪ್ರದಾಯವಾದಿ ರಾಷ್ಟ್ರವಾದ ಐರ್ಲೆಂಡಿನ ಈ ಕಾನೂನು ತಿದ್ದುಪಡಿಯಿಂದ ನೂತನ ಇತಿಹಾಸ ನಿರ್ಮಾಣವಾಗಲಿದೆ.ಶನಿವಾರ ನಡೆದ ಜನಮತ ಗಣನೆ ಪ್ರಕಾರ ಗರ್ಭಪಾತಕ್ಕೆ ಅವಕಾಶ ಕಲ್ಪಿಸುವಂತೆ  ಶೇ 68ರಷ್ಟು ಮತಗಳು ಲಭಿಸಿದೆ.
ಸವಿತಾ ಸಾವಿಗೆ ನ್ಯಾಯ ದಕ್ಕಿತು
ಬೆಳಗಾವಿಯ ಡಾ.ಸವಿತಾ ಐರ್ಲೆಂಡಿನಲ್ಲಿದ್ದು ಗರ್ಭ ಧರಿಸಿದ ವೇಳೆ ಕೆಲ ಆರೋಗ್ಯ ಸಮಸ್ಯೆಯಿಂದ ಬಳಲಿದ್ದರು. ಆಗ ಅವರು ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ಮುಂದಾದಾಗ ಆ ದೇಶದ ಕಾನೂನಿನಲ್ಲಿ ಅದಕ್ಕೆ ಅವಕಾಶವಿರದ ಕಾರಣ ವೈದ್ಯರು ಆಕೆಯ ಗರ್ಭಪಾತ ಮಾಡಲು ನಿರಾಕರಿಸಿದ್ದರು.
ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ವಿಫಲವಾದ ಸವಿತಾ ಅಕ್ಟೋಬರ್ 2012ರಲ್ಲಿ ಸಾವನ್ನಪ್ಪಿದ್ದರು.ವೈದ್ಯರ ನಿರ್ಲಕ್ಷವೇ ಸವಿತಾ ಸಾವಿಗೆ ಕಾರಣವೆಂದು ತಿಳಿದುಬಂದಿದೆ. ಸವಿತಾ ಸಾವನ್ನು ಖಂಡಿಸಿ ಅಲ್ಲಿ ನೆಲೆಸಿರುವ ಭಾರತೀಯರು ಸೇರಿ ಐರ್ಲೆಂಡ್ ಮಹಿಳೆಯರು ಕಳೆದ ಆರು ವರ್ಷದಿಂದ ಪ್ರತಿಭಟಿಸುತ್ತಿದ್ದರು. 
ಈ ಸಂಬಂಧ ಐರ್ಲೆಂಡ್ ಸಂಸತ್ತಿನಲ್ಲಿ ಚರ್ಚೆ ನಡೆದಿದ್ದು ಗರ್ಭಪಾತ ಕುರಿತ ವಿಶೇಷ ಮಸೂದೆಯೂ ಅಂಗೀಕಾರವಾಗಿತ್ತು 2013ರಲ್ಲೇ ಅಂಗೀಕರಿಸಲ್ಪಟ್ಟ ಮಸೂದೆಗೆ ಕಾನೂನು ಮಾನ್ಯತೆ ಮಾತ್ರ ದೊರಕಿರಲಿಲ್ಲ.
ಈ ಕುರಿತಂತೆ ಪ್ರತಿಕ್ರಯಿಸಿರುವ ಸವಿತಾ ತಂದೆ ಅಂದಾನಪ್ಪ ಝಳಗಿ ಪ್ರತಿಕ್ರಯಿಸಿದ್ದು "ಕಡೆಗೂ ನಮಗೆ ನ್ಯಾಯ ದಕ್ಕಿದೆ,  ಐರ್ಲೆಂಡ್ ಕಡೆಗೂ ತನ್ನ ಕರಾಳ ನೀತಿಯನ್ನು ಬದಲಿಸಲು ಮುಂದಾದದ್ದು ಸಂತಸ ತಂದಿದೆ.ನನ್ನ ಪುತ್ರಿಗೆ ಒದಗಿದ ಸ್ಥಿತಿ ಇನ್ನಾರಿಗೂ ಬರಬಾರದು.ಕಾನೂನು ತಿದ್ದುಪಡಿ ವಿಧೇಯಕಕ್ಕೆ ನನ್ನ ಪುತ್ರಿಯ ಹೆಸರಿಡಬೇಕು.ಈ ಪ್ರಕಾರ ಸವಿತಾ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು." ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com