ಹಫೀಜ್ ಸಯೀದ್
ವಿದೇಶ
ಹಫೀಜ್ ಸಯೀದ್ ನ್ನು ಕಾನೂನಿನ ಕಟಕಟೆಗೆ ತಂದರೆ ಪಾಕ್ ರಾಜಕೀಯ ಬೆಲೆ ತೆರಬೇಕಾದೀತು: ಮಾಜಿ ಐಎಸ್ಐ ಮುಖ್ಯಸ್ಥ ಅಸಾದ್ ದುರಾನಿ
ಹಫೀಜ್ ಸಯೀದ್ ನ್ನು ಕಾನೂನಿನ ಕಟಕಟೆಗೆ ತಂದದೆ ಪಾಕಿಸ್ತಾನ ರಾಜಕೀಯವಾಗಿ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದಿ ಮಾಜಿ ಐಎಸ್ ಐ ಮುಖ್ಯಸ್ಥ ಅಸಾದ್ ದುರಾನಿ ಹೇಳಿದ್ದಾರೆ.
ನವದೆಹಲಿ: ಹಫೀಜ್ ಸಯೀದ್ ನ್ನು ಕಾನೂನಿನ ಕಟಕಟೆಗೆ ತಂದದೆ ಪಾಕಿಸ್ತಾನ ರಾಜಕೀಯವಾಗಿ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದಿ ಮಾಜಿ ಐಎಸ್ ಐ ಮುಖ್ಯಸ್ಥ ಅಸಾದ್ ದುರಾನಿ ಹೇಳಿದ್ದಾರೆ.
ಹಫೀಜ್ ಸಯೀದ್ ವಿರುದ್ಧ ಪಾಕಿಸ್ತಾನ ಕಾನೂನು ಕ್ರಮ ಕೈಗೊಳ್ಳುವುದೇ ಆದರೆ ಭಾರತದ ಪರವಾಗಿ ನೀವು ಹಫೀಜ್ ಸಯೀದ್ ನನ್ನು ಟಾರ್ಗೆಟ್ ಮಾಡುತ್ತಿದ್ದೀರ, ಆತ ಮುಗ್ಧ ಎಂಬ ಪ್ರತಿಕ್ರಿಯೆ ಪಾಕಿಸ್ತಾನದಲ್ಲಿ ಕೇಳಿಬರುತ್ತದೆ. ಇದರಿಂದಾಗಿ ಪಾಕ್ ಬಹುದೊಡ್ಡ ರಾಜಕೀಯ ಬೆಲೆ ತೆರಬೇಕಾಗುತ್ತದೆ ಎಂದು ಅಸಾದ್ ದುರಾನಿ ಹೇಳಿದ್ದಾರೆ.
ಮಾಜಿ ರಾ ಮುಖ್ಯಸ್ಥ ಎಎಸ್ ದುಲಾತ್ ಅವರೊಂದಿಗೆ ನಡೆದಿರುವ ಸಂಭಾಷಣೆಗಳನ್ನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿರುವ ಅಸಾದು ದುರಾನಿ, ಭಾರತದ ಸರ್ಜಿಕಲ್ ಸ್ಟ್ರೈಕ್, ಕುಲಭೂಷಣ್ ಜಾಧವ್, ನವಾಜ್ ಷರೀಫ್, ಕಾಶ್ಮೀರ, ಬುರ್ಹನ್ ವಾನಿ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದು,
ಹಫೀಜ್ ಸಯೀದ್ ನ್ನು ಕಾನೂನಿನ ಕಟಕಟೆಗೆ ತಂದರೆ ಪಾಕ್ ರಾಜಕೀಯ ಬೆಲೆ ತೆರಬೇಕಾದೀತು ಎಂದು ದುಲಾತ್ ಪ್ರಶ್ನೆಗೆ ತಾವು ಉತ್ತರಿಸಿರುವುದನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಹಫೀಜ್ ಸಯೀದ್ ವಿರುದ್ಧ ಹೊಸದಾದ ಆರೋಪಗಳು ಯಾವುದೂ ಇಲ್ಲದೇ ಆತನನ್ನು ಕೋರ್ಟ್ ಗೆ ಎಳೆತರಲಾಗಿತ್ತು. ಆತ 6 ತಿಂಗಳ ನಂತರ ಗೃಹಬಂಧನದಿಂದ ಬಿಡುಗಡೆಯಾಗಿದ್ದ ಎಂದು ದುರಾನಿ ಹೇಳಿದ್ದಾರೆ.
ದುರಾನಿ ಅವರ ಪುಸ್ತಕ ದಿ ಸ್ಪೈ ಕ್ರೋನಿಕಲ್ಸ್: ರಾ ಐಎಸ್ಐ ಆಂಡ್ ದಿ ಇಲ್ಯೂಷನ್ ಆಫ್ ಪೀಸ್ ಕುರಿತಂತೆ ಪಾಕಿಸ್ತಾನ ಸೇನೆ ಆಕ್ಷೇಪ ವ್ಯಕ್ತಪಡಿಸಿದ್ದು, ಸೇನೆಯ ನೀತಿ ಸಂಹಿತೆಯನ್ನು ಉಲ್ಲಂಘಿಸುವಂತಹ ಅಂಶಗಳು ಪುಸ್ತಕದಲ್ಲಿವೆ ಎಂದು ಹೇಳಿದ್ದಿ, ಸ್ಪಷ್ಟನೆ ಕೋರಿ ಸಮನ್ಸ್ ಜಾರಿ ಮಾಡಿದೆ.

