ನಿವೃತ್ತಿಯಾದರೂ ಬಿಟ್ಟಿಲ್ಲ ಶಿಕ್ಷಕ ವೃತ್ತಿ, ಶ್ವೇತ ಭವನದ ಪತ್ರದಲ್ಲಿ ದೋಷಗಳನ್ನು ಗುರುತಿಸಿದ ಶಿಕ್ಷಕಿ!

ಶಿಕ್ಷಕರು ನಿವೃತ್ತರಾದ ನಂತರವೂ ತಪ್ಪುಗಳನ್ನು ತಿದ್ದುವ ಕೆಲಸ ನಿರಂತರವಾಗಿ ಮಾಡುತ್ತಿರುತ್ತಾರೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ.
ನಿವೃತ್ತಿಯಾದರೂ ಬಿಟ್ಟಿಲ್ಲ ಶಿಕ್ಷಕ ವೃತ್ತಿ, ಶ್ವೇತ ಭವನದ ಪತ್ರದಲ್ಲಿ ದೋಷಗಳನ್ನು ಗುರುತಿಸಿದ ಶಿಕ್ಷಕಿ!
ನಿವೃತ್ತಿಯಾದರೂ ಬಿಟ್ಟಿಲ್ಲ ಶಿಕ್ಷಕ ವೃತ್ತಿ, ಶ್ವೇತ ಭವನದ ಪತ್ರದಲ್ಲಿ ದೋಷಗಳನ್ನು ಗುರುತಿಸಿದ ಶಿಕ್ಷಕಿ!
ನ್ಯೂಯಾರ್ಕ್: ಶಿಕ್ಷಕರು ನಿವೃತ್ತರಾದ ನಂತರವೂ  ತಪ್ಪುಗಳನ್ನು ತಿದ್ದುವ ಕೆಲಸ ನಿರಂತರವಾಗಿ ಮಾಡುತ್ತಿರುತ್ತಾರೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಈಕೆ ಸಾಮಾನ್ಯರ ತಪ್ಪನ್ನು ತಿದ್ದಿ ಸುದ್ದಿಯಾಗಿಲ್ಲ, ಬದಲಾಗಿ ಅಮೆರಿಕದ ಶಕ್ತಿ ಕೇಂದ್ರ ಶ್ವೇತ ಭವನದ ಪತ್ರಗಳಲ್ಲಿ ಕಂಡು ಬಂದ ದೋಷಗಳನ್ನು ತಿದ್ದಿದ್ದು ಸುದ್ದಿಯಾಗಿದ್ದಾರೆ. 
ಆಗಿದ್ದು ಇಷ್ಟೇ,  ಫ್ಲೋರಿಡಾದ ಶಾಲೆಯೊಂದರಲ್ಲಿ ನಡೆದಿದ್ದ ಶೂಟಿಂಗ್ ನಲ್ಲಿ 17 ಜನರು ಮೃತಪಟ್ಟಿದ್ದರು. ಈ ಘಟನೆಯ ಬಗ್ಗೆ ಯವೊನೆ ಮ್ಯಾಸನ್ (61) ಎಂಬ ನಿವೃತ್ತ ಶಿಕ್ಷಕಿ ಡೊನಾಲ್ಡ್ ಟ್ರಂಪ್ ಗೆ ಪತ್ರ ಬರೆದು ಪ್ರತಿಯೊಬ್ಬರ ಕುಟುಂಬ ಸದಸ್ಯರನ್ನು ಭೇಟಿ ಮಾಡುವುದರ ಬಗ್ಗೆ ಕೇಳಿದ್ದರು. ಕೊನೆಗೊಂದು ದಿನ ಶ್ವೇತ ಭವನದಿಂದ ಉತ್ತರವೂ ಬಂದಿದೆ. ಆದರೆ ಅದರಲ್ಲಿ ಶಿಕ್ಷಕಿ ಪ್ರಸ್ತಾಪಿಸಿದ್ದ ಆಕೆಯ ಆತಂಕಗಳ ಬಗ್ಗೆ ಏನನ್ನೂ ಪ್ರಸ್ತಾಪಿಸಿರಲಿಲ್ಲ. ಇದರಿಂದ ಕುಪಿತಗೊಂಡ ಶಿಕ್ಷಕಿ ಶ್ವೇತ ಭವನದಿಂದ ತಮಗೆ ಬಂದಿದ್ದ ಪತ್ರದಲ್ಲಿದ್ದ ದೋಷಗಳನ್ನು ತೋರಿಸಿ ಫೇಸ್ ಬುಕ್ ನಲ್ಲಿ ಯಥಾವತ್ ಪ್ರಕಟಿಸಿದ್ದು, ಇದನ್ನೇ ಶ್ವೇತ ಭವನಕ್ಕೆ ಇ-ಮೇಲ್ ಮೂಲಕ ವಾಪಸ್ ಕಳಿಸಿದ್ದಾರೆ. 
"ಪತ್ರದಲ್ಲಿ ನಾನು ಪ್ರಸ್ತಾಪಿಸಿದ್ದ ಆತಂಕಕಾರಿ ವಿಷಯಗಳ ಬಗ್ಗೆ ಶ್ವೇತ ಭವನ ಉತ್ತರಿಸಿಲ್ಲ, ಬದಲಾಗಿ ಘಟನೆ ನಡೆದ ಬಳಿಕ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ, ಎಷ್ಟೆಲ್ಲಾ ಸಭೆಗಳನ್ನು ಮಾಡಿದ್ದೇವೆ ಎಂಬುದನ್ನು ಹೇಳಲಾಗಿತ್ತು. ಇದನ್ನು ಗಮನಿಸಿದ ಶಿಕ್ಷಕಿ ಪತ್ರದಲ್ಲಿದ್ದ ಅಕ್ಷರ ಹಾಗೂ ವ್ಯಾಕರಣ ದೋಷಗಳನ್ನು ಗುರುತಿಸಿ, ನೀವು ಗ್ರಾಮರ್ ನ್ನು ಪರಿಶೀಲಿಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com