ಇಂಡೊನೇಷ್ಯಾ ನಾಗರಿಕರಿಗೆ 30 ದಿನಗಳ ಉಚಿತ ವೀಸಾ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಇಂಡೊನೇಷ್ಯಾ ನಾಗರಿಕರಿಗೆ ಪ್ರಧಾನಿ ನರೇಂದ್ರಮೋದಿ 30 ದಿನಗಳ ಉಚಿತ ವೀಸಾ ಸೌಲಭ್ಯವನ್ನು ಘೋಷಿಸಿದ್ದು, ನವ ಭಾರತ ನಿರ್ಮಾಣ ಮಾಡಲು ನಮ್ಮ ದೇಶಕ್ಕೆ ವಲಸೆ ಬರುವಂತೆ ಆಹ್ವಾನಿಸಿದ್ದಾರೆ.
ಇಂಡೊನೇಷ್ಯಾ ಪ್ರಧಾನಿ ಜೊತೆಗೆ ಪ್ರಧಾನಿ ನರೇಂದ್ರಮೋದಿ
ಇಂಡೊನೇಷ್ಯಾ ಪ್ರಧಾನಿ ಜೊತೆಗೆ ಪ್ರಧಾನಿ ನರೇಂದ್ರಮೋದಿ
Updated on

ಜಕಾರ್ತ: ಇಂಡೊನೇಷ್ಯಾ ನಾಗರಿಕರಿಗೆ ಪ್ರಧಾನಿ ನರೇಂದ್ರಮೋದಿ 30 ದಿನಗಳ ಉಚಿತ ವೀಸಾ ಸೌಲಭ್ಯವನ್ನು ಘೋಷಿಸಿದ್ದು, ನವ ಭಾರತ ನಿರ್ಮಾಣ ಮಾಡಲು ನಮ್ಮ ದೇಶಕ್ಕೆ ವಲಸೆ  ಬರುವಂತೆ ಆಹ್ವಾನಿಸಿದ್ದಾರೆ.

ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಅವರು, "ನಮ್ಮ ರಾಷ್ಟ್ರಗಳ ಹೆಸರುಗಳು ಕೇವಲ ಪ್ರಾಸಬದ್ಧವಾಗಿಲ್ಲ,  ಆದರೆ ಭಾರತ-ಇಂಡೋನೇಷ್ಯಾ ಸ್ನೇಹಕ್ಕೆ  ವಿಶಿಷ್ಟ ಲಯವಿದೆ." ಎಂದರು. 30 ದಿನಗಳವರೆಗೂ ಭಾರತ ಸುತ್ತಲೂ ಇಂಡೊನೇಷ್ಯಾ ಜನತೆಗೆ ಉಚಿತ ವೀಸಾ ನೀಡುವುದಾಗಿ ಅವರು ತಿಳಿಸಿದರು.

"ನಿಮ್ಮಲ್ಲಿ ಹಲವರು ಭಾರತಕ್ಕೆ ಬಂದಿರಲಿಲ್ಲ. ಮುಂದಿನ ವರ್ಷ ಪ್ರಯಾಗದಲ್ಲಿ ನಡೆಯಲಿರುವ ಕುಂಬಮೇಳದಲ್ಲಿ ಭಾಗವಹಿಸಲು ಎಲ್ಲರನ್ನೂ ಆಹ್ವಾನಿಸುವುದಾಗಿ ಹೇಳಿದ ಮೋದಿ, ಕುಂಬಮೇಳ, ಭೂಮಿಯ ಮೇಲಿನ  ಅತಿ ದೊಡ್ಡ ಮಾನವ ಸಮೂಹದ ಪ್ರದೇಶವಾಗಿದೆ ಎಂದರು.

ದೇಶವನ್ನು ಭ್ರಷ್ಟಾಚಾರ ಮುಕ್ತ, ನಾಗರೀಕ ಕೇಂದ್ರಿತ ಮತ್ತು ಅಭಿವೃದ್ದಿಪರ ದೇಶವನ್ನಾಗಿಸುವುದು ಸರ್ಕಾರದ ಮೊದಲ  ಆದ್ಯತೆಯಾಗಿದೆ.  "ನಮ್ಮ ಸರಕಾರವು 21 ನೇ ಶತಮಾನದ ಅಗತ್ಯತೆ ಮತ್ತು ನಿರೀಕ್ಷೆಯ ಪ್ರಕಾರ ಭಾರತವನ್ನು ತಯಾರಿಸುತ್ತಿದೆ" ಎಂದು ಅವರು ಹೇಳಿದರು.

ಸುಲಭವಾಗಿ ವ್ಯಾಪಾರ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಸುಲಭ ಬದುಕಿನ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ನಮ್ಮ ಪ್ರಕ್ರಿಯೆ ಪಾರದರ್ಶಕತೆ ಹಾಗೂ ಸೂಕ್ಷ್ಮತೆಯಿಂದ ಕೂಡಿದ್ದು, 2022ರೊಳಗೆ  ನವ ಭಾರತ ಕನಸು ನನಸು ಮಾಡುವ ನಿಟ್ಟಿನಲ್ಲಿ  ಕಾರ್ಯೋನ್ಮುಖರಾಗಿರುವುದಾಗಿ ಮೋದಿ ತಿಳಿಸಿದರು.

ಕಳೆದ ಎರಡೂವರೆ ವರ್ಷಗಳಲ್ಲಿ 9 ಸಾವಿರಕ್ಕೂ ಹೆಚ್ಚು  ಸ್ಟಾರ್ಟ್ ಅಪ್ ನೊಂದಾಣಿಯಾಗಿದ್ದು, ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ  ಪರಿಸರ ಸ್ನೇಹಿ ಸ್ಟಾರ್ಟ್ ಅಪ್ ನ್ನು ಭಾರತದಲ್ಲಿ ಸ್ಥಾಪನೆ ಮಾಡುತ್ತಿರುವುದಾಗಿ ಅವರು ಹೇಳಿದರು.

ಇಂಡೊನೇಷ್ಯಾ ಹಾಗೂ ಭಾರತದ ಕಾನೂನು, ಅಧಿಕಾರಿಗಳು, ಇಲಾಖೆ, ಮೇಜು, ಕುರ್ಚಿ ಎಲ್ಲವೂ ಒಂದೇ ಆಗಿದೆ. ಆದರೆ, ಸರ್ಕಾರ ಮತ್ತು ದೇಶ ಮಾತ್ರ ಬದಲಾವಣೆಯಾಗಿವೆ , ಒಂದು ವೇಳೆ ನೀತಿ ಸ್ಪಷ್ಟವಾಗಿದ್ದರೆ, ಅಭಿವೃದ್ದಿ ಹೇಗೆ  ಆಗಬಹುದು ಎಂಬುದನ್ನು ತೋರಿಸುತ್ತೇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com