ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟಿಸಿ, ಕಚೇರಿಯಿಂದ ಹೊರನಡೆದ ಗೂಗಲ್‌ ನೌಕರರು

ಕಚೇರಿಯಲ್ಲಿ ಲೈಂಗಿಕ ಕಿರುಕುಳ, ತಾರತಮ್ಯ ಮತ್ತು ಶೋಷಣೆಯನ್ನು ಖಂಡಿಸಿ ವಿಶ್ವದಾದ್ಯಂತ ನೂರಾರು...
ಗೂಗಲ್ ನೌಕರರು
ಗೂಗಲ್ ನೌಕರರು
Updated on
ಸ್ಯಾನ್‌ ಫ್ರಾನ್ಸಿಸ್ಕೋ : ಕಚೇರಿಯಲ್ಲಿ ಲೈಂಗಿಕ ಕಿರುಕುಳ, ತಾರತಮ್ಯ ಮತ್ತು ಶೋಷಣೆಯನ್ನು ಖಂಡಿಸಿ ವಿಶ್ವದಾದ್ಯಂತ ನೂರಾರು ಗೂಗಲ್‌ ನೌಕರರು ಪ್ರತಿಭಟನೆ ನಡೆಸಿ, ಕಚೇರಿಯಿಂದ ಹೊರ ನಡೆದ ಅಪರೂಪದ ಘಟನೆ ಗುರುವಾರ ನಡೆದಿದೆ. 
ಕಂಪೆನಿಯ ಕಾರ್ಯನಿರ್ವಾಹಕರಿಂದ ನೌಕರರ ಮೇಲೆ ಅನಿರ್ಬಂಧಿತ ಅಧಿಕಾರ ಪ್ರಯೋಗ, ಜನಾಂಗೀಯತೆ, ಲೈಂಗಿಕ ಶೋಷಣೆಯನ್ನು ಖಂಡಿಸಿ ಗೂಗಲ್‌ ನೌಕರರು ಪ್ರತಿಭಟನೆ ನಡೆಸಿದರು. 
ಸಂಘಟಕರು ನಿನ್ನೆ ತಡವಾಗಿ ಹೊರಡಿಸಲಾಗಿರುವ ಹೇಳಿಕೆಯಲ್ಲಿ ಗೂಗಲ್‌ ಮಾತೃ ಸಂಸ್ಥೆಯಾಗಿರುವ Alphabet Inc. ಮುಖ್ಯಸ್ಥರನ್ನು ಭೇಟಿಯಾಗಿ ಕಂಪೆನಿಯ ನಿರ್ದೇಶಕರ ಮಂಡಳಿಯಲ್ಲಿ ನೌಕರ ಪ್ರತಿನಿಧಿಯೋರ್ವರನ್ನು ಸೇರಿಸಿಕೊಳ್ಳುವಂತೆ ಮತ್ತು ವೇತನ-ಸಮಾನತೆ ಅಂಕಿ ಅಂಶವನ್ನು ಆಂತರಿಕವಾಗಿ ಹಂಚಿಕೊಳ್ಳುವಂತೆ ಮನವಿ ಮಾಡಿದರು. ಜತೆಗೆ ಕಾರ್ಯ ಸ್ಥಳದಲ್ಲಿನ ಕಿರುಕುಳ-ಸಂಬಂಧಿ ಪರಿಹಾರ ಕೋರಿಕೆ ಪ್ರಕರಣಗಳನ್ನು ನ್ಯಾಯೋಚಿತವಾಗಿ ಇತ್ಯರ್ಥಪಡಿಸುವ ದಿಶೆಯಲ್ಲಿನ ಮಾನವ ಸಂಪನ್ಮೂಲ ಉಪಕ್ರಮಗಳಿಗೆ ಬದಲಾವಣೆ ತರಬೇಕು ಎಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com