ಅಮೆರಿಕಾ-ಭಾರತ ಸ್ನೇಹದ ಪ್ರತಿಬಿಂಬಕ್ಕೆ ದೀಪಾವಳಿ ಒಂದು ವಿಶೇಷ ಅವಕಾಶ- ಡೊನಾಲ್ಡ್ ಟ್ರಂಪ್

ದೀಪಾವಳಿ ಶುಭಾಶಯ ಕೋರಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬೆಳಕಿನ ಹಬ್ಬ ಅಮೆರಿಕಾ ಮತ್ತು ಭಾರತ ನಡುವಿನ ಸ್ನೇಹದ ಬಾಂಧವ್ಯ ಬಲವರ್ದನೆಗೆ ಒಂದು ವಿಶೇಷ ಅವಕಾಶವಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್
ಪ್ರಧಾನಿ ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ದೀಪಾವಳಿಶುಭಾಶಯ ಕೋರಿರುವ ಅಮೆರಿಕಾಅಧ್ಯಕ್ಷ ಡೊನಾಲ್ಡ್ ಟ್ರಂಪ್,ಬೆಳಕಿನಹಬ್ಬ ಅಮೆರಿಕಾ ಮತ್ತು ಭಾರತನಡುವಿನ ಸ್ನೇಹದ ಬಾಂಧವ್ಯಬಲವರ್ದನೆಗೆ ಒಂದು ವಿಶೇಷಅವಕಾಶವಾಗಿದೆ ಎಂದು ಹೇಳಿದ್ದಾರೆ.

ಅಮೆರಿಕದಮೊದಲ ಮಹಿಳೆ ಮೇಲಾನಿಯಾ ಕೂಡಾದೀಪಾವಳಿ ಎಲ್ಲರನ್ನೂ ಸುಖ,ಶಾಂತಿ,ನೆಮ್ಮದಿಯಿಂದಇರುವಂತೆ ಮಾಡಲಿ ಎಂದು ಶುಭಹಾರೈಸಿದ್ದಾರೆ ಎಂದು ಟ್ರಂಪ್ಹೇಳಿದ್ದಾರೆ.

ಅಮೆರಿಕಾದಬೆಳವಣಿಗೆಯಲ್ಲಿ ಅಮೆರಿಕಾದಲ್ಲಿಭಾರತೀಯರು ಮಹೋನ್ನತ ಕೊಡುಗೆಗಳನ್ನುನೀಡುತ್ತಿದ್ದಾರೆ.ಉದ್ಯಮ,ಕೈಗಾರಿಕೆ,ಸಾರ್ವಜನಿಕಸೇವೆ,ಶಿಕ್ಷಣ,ವೈಜ್ಞಾನಿಕಸಂಶೋಧನೆ ಮತ್ತಿತರ ವಲಯಗಳಲ್ಲಿ ಅಮೆರಿಕಾದ ವರ್ಚಸ್ಸು ಹಿಗ್ಗಿಸುವಲ್ಲಿಭಾರತೀಯರ ಕಾರ್ಯ ಶ್ಲಾಘನೀಯವಾಗಿರುವುದಾಗಿಟ್ರಂಪ್ ಹೇಳಿದ್ದಾರೆ.

ಕತ್ತಲೆಯಿಂದಬೆಳಕಿನೆಡೆಗೆ,ಕೆಡಕಿನಿಂದಒಳಿತಿನ ಕಡೆಗೆ ಸಂಕೇತವಾಗಿರುವದೀಪಾವಳಿ ಭಾರತೀಯರನ್ನು ಸಂತೋಷವಾಗಿಡಲಿಎಂದು ಅವರು ತಮ್ಮ ಸಂದೇಶದಲ್ಲಿತಿಳಿಸಿದ್ದಾರೆ.

ರಿಪಬ್ಲಿಕನ್ರಾಷ್ಟ್ರೀಯ ಸಮಿತಿ ಮುಖ್ಯಸ್ಥರೊನ್ನಾ ಮ್ಯಾಕ್ ಡೆನಿಯಲ್ ಹಾಗೂ ಅಮೆರಿಕಾದಲ್ಲಿರುವ ಭಾರತೀಯಕಾಂಗ್ರೆಸ್ ಮಹಿಳೆ ಪ್ರಮೀಳಾಜೈಪಾಲ್ ಕೂಡಾ ಕೂಡಾ ದೀಪಾವಳಿಹಬ್ಬದ ಶುಭಾಶಯ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com