ಅಲ್ಲಿನ ಫೆಡರಲ್ ಪ್ಯಾರಾ ಮಿಲಿಟರಿ ಪಡೆಯ ಭಾಗವಾಗಿರುವ ಫ್ರಂಟಿಯರ್ ಕಾರ್ಪ್ಸ್ ಆಫ್ ಬಲೂಚಿಸ್ಥಾನ್ ಪಾಕಿಸ್ತಾನದ ಸೆನೆಟ್ ಗೆ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಮಾಹಿತಿ ನೀಡಿದೆ. ಡಾನ್ ಪತ್ರಿಕೆ ವರದಿಯ ಪ್ರಕಾರ ಬಲೂಚಿಸ್ಥಾನ ಫ್ರಂಟಿಯರ್ ಕಾರ್ಪ್ಸ್ ಮೇಜರ್ ಜನರಲ್ ನದೀಮ್ ಅಂಜುಮನ್ ನಮ್ಮ ದೇಶದ ಶತ್ರುಗಳು ಬಲೂಚಿಸ್ಥಾನ ಪ್ರಾಂತ್ಯದಲ್ಲಿನ ಹಿಂಸಾಚಾರವನ್ನು ಹೆಚ್ಚಿಸುತ್ತಿದ್ದು, ಆ ಪ್ರಾಂತ್ಯವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶವನ್ನು ಬಲವಾಗಿ ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.