ನೂತನ ಕೃತಿಯಲ್ಲಿ ಟ್ರಂಪ್ ವಿರುದ್ಧ ಮಿಚೆಲ್ ಒಬಾಮಾ ವಾಗ್ದಾಳಿ!

ಅಮೆರಿಕಾದ ಮಾಜಿ ಅಧ್ಯಕ್ಷ ಹಾಗೂ ತಮ್ಮ ಪತಿ ಬರಾಕ್ ಒಬಾಮಾ ಅವರ ನಾಗರಿಕತ್ವದ ಬಗ್ಗೆ ಪ್ರಶ್ನಿಸಿರುವ ಅಮೆರಿಕಾ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕ್ಷಮಿಸುವುದಿಲ್ಲ ಎಂದು ಆ ದೇಶದ ಮಾಜಿ ಮೊದಲ ಮಹಿಳೆ ಮಿಚೆಲ್ ಒಬಾಮಾ ಹೇಳಿದ್ದಾರೆ.
ಬರಾಕ್ ಒಬಾಮಾ, ಮಿಚೆಲ್ ಒಬಾಮಾ
ಬರಾಕ್ ಒಬಾಮಾ, ಮಿಚೆಲ್ ಒಬಾಮಾ

ವಾಷಿಂಗ್ಟನ್ : ಅಮೆರಿಕಾದ ಮಾಜಿ  ಅಧ್ಯಕ್ಷ ಹಾಗೂ ತಮ್ಮ ಪತಿ ಬರಾಕ್  ಒಬಾಮಾ ಅವರ ನಾಗರಿಕತ್ವದ ಬಗ್ಗೆ ಪ್ರಶ್ನಿಸಿರುವ ಅಮೆರಿಕಾ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕ್ಷಮಿಸುವುದಿಲ್ಲ ಎಂದು  ಆ ದೇಶದ ಮಾಜಿ ಮೊದಲ ಮಹಿಳೆ ಮಿಚೆಲ್ ಒಬಾಮಾ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಹಾಗೂ ಅವರ ವಂಚಕರಿಂದ ತಮ್ಮ ಕುಟುಂಬ ಸಂಕಷ್ಟಕ್ಕೆ ತುತ್ತಾಯಿತು ಎಂದು ಮಿಚೆಲ್ ಒಬಾಮಾ ಬರೆದಿರುವ ನೂತನ ಪುಸ್ತಕದಲ್ಲಿ ಕಿಡಿಕಾರಿದ್ದಾರೆ.

2016ರ ಚುನಾವಣೆಯಲ್ಲಿ  ಅರ್ಹ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಿಲ್ಲರಿ ಕ್ಲಿಂಟನ್  ಅವರಿಗಿಂತ ಡೊನಾಲ್ಡ್ ಟ್ರಂಪ್ ಗೆ ಹೆಚ್ಚಿನ ಮಂದಿ ಮಹಿಳೆಯರು ಮತ ಹಾಕಿರುವುದಕ್ಕೆ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಮೆರಿಕಾ ರಾಜಕೀಯದ ಬಗ್ಗೆ ಬರುತ್ತಿರುವ ಬಹು ನಿರೀಕ್ಷಿತ ಕೃತಿ ಇದಾಗಿದ್ದು,  ಮಂಗಳವಾರ  ಪ್ರತಿಗಳು  ಮಳಿಗೆಗಳಲ್ಲಿ  ದೊರೆಯಲಿವೆ.

ವಂಚಕರ ಧರ್ಮಾಂಧತೆ, ಕ್ಷುದ್ರ ಮನೋಭಾವದಿಂದ ಅನೇಕ ಕಷ್ಟಗಳನ್ನು ಸಹಿಸಿದ್ದು, ಉದ್ದೇಶಪೂರ್ವಕವಾಗಿ ತೊಂದರೆ ನೀಡಲಾಗುತಿತ್ತು, ಇದು ಅತ್ಯಂತ ಅಪಾಯಕಾರಿ ಎಂದು ಪುಸ್ತಕದಲ್ಲಿ ಅವರು ಹೇಳಿದ್ದಾರೆ.

ಅಸ್ಥಿರ ಮನಸ್ಸಿನ ಯಾರಾದರೂ ಗನ್ ತೆಗೆದುಕೊಂಡು  ವಾಷಿಂಗ್ಟನ್ ಕಡೆ ಓಡಿದರೆ ಏನು ಮಾಡುವುದು, ಆ ವ್ಯಕ್ತಿಯು ನಮ್ಮ ಹೆಣ್ಣುಮಕ್ಕಳನ್ನು  ಹುಡುಕುತ್ತಿದ್ದರೆ ಏನು? ಎಂದು ಅವರು ಪ್ರಶ್ನಿಸಿದ್ದು, ತಮ್ಮ ಕುಟುಂಬಕ್ಕೆ ಸಂಕಷ್ಟ ನೀಡಿದ ಡೊನಾಲ್ಡ್ ಟ್ರಂಪ್ ನ್ನು ಕ್ಷಮಿಸುವುದಿಲ್ಲ ಎಂದು ಮಿಚೆಲ್ ಒಬಾಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com