ಸೌದಿ ಪತ್ರಕರ್ತನ ಶವವನ್ನು ಆ್ಯಸಿಡ್ ಹಾಕಿ ಸುಟ್ಟು ಕರಗಿಸಿ ಚರಂಡಿಗೆ ಬಿಡಲಾಗಿದೆ: ಟರ್ಕಿ ಮಾಧ್ಯಮ

ಭೀಕರವಾಗಿ ಹತ್ಯೆಗೀಡಾಗಿದ್ದ ಸೌದಿ ಪತ್ರಕರ್ತ ಜಮಾಲ್ ಖಶೋಗ್ಗಿ ದೇಹವನ್ನು ಕೊಲೆಗಾರರು ಆಸಿಡ್ ನಲ್ಲಿ ಕರಗಿಸಿ ಚರಂಡಿಗೆ ಎಸೆದಿದ್ದರು ಎಂದು ಟರ್ಕಿ ಪತ್ರಿಕೆಯೊಂದು ವರದಿ ಮಾಡಿದೆ.
ಜಮಾಲ್ ಖಶೋಗ್ಗಿ
ಜಮಾಲ್ ಖಶೋಗ್ಗಿ
ಅಂಕರಾ(ಟರ್ಕಿ): ಭೀಕರವಾಗಿ ಹತ್ಯೆಗೀಡಾಗಿದ್ದ ಸೌದಿ ಪತ್ರಕರ್ತ ಜಮಾಲ್ ಖಶೋಗ್ಗಿ ದೇಹವನ್ನು ಕೊಲೆಗಾರರು ಆಸಿಡ್ ನಲ್ಲಿ ಕರಗಿಸಿ ಚರಂಡಿಗೆ ಎಸೆದಿದ್ದರು ಎಂದು ಟರ್ಕಿ ಪತ್ರಿಕೆಯೊಂದು ವರದಿ ಮಾಡಿದೆ.
ಇಸ್ತಾನ್ ಬುಲ್ ನಲ್ಲಿರುವ ಸೌದಿ ಕನ್ಸುಲೇಟ್ ನಲ್ಲಿ ಚರಂಡಿಯಿಂದ ಸಂಗ್ರಹಿಸಲಾದ ಅವಶೇಷಗಳಲ್ಲಿ ಆಸಿಡ್ ಅಂಶವಿರುವುದು ಪತ್ತೆಯಾಗಿದೆ.ಎಂದು ಟರ್ಕಿ ಸರ್ಕಾರಿ ಸ್ವಾಮ್ಯದ ದಿನಪತ್ರಿಕೆ ಸಬಾಹ್ ವರದಿ ಮಾಡಿದೆ.
ಜಮಾತ್ ದೇಹವನ್ನು ದ್ರವರೂಪದಲ್ಲಿ ಶೇಖರಿಸಿ ಚರಂಡಿಗೆ ಎಸೆಯಲಾಗಿದೆ ಎಂದು ತನಿಖೆಯಿಂದ ಬಹಿರಂಗವಾಗಿದೆ.
59 ವರ್ಷದ ಜಮಾಲ್ ತಮ್ಮ ವಿವಾಹದ ದಾಖಲೆ ಪಡೆದುಕೊಳ್ಳುವುದಕ್ಕಾಗಿ ಅಕ್ಟೋಬರ್ 2ರಂದು ಸೌದಿ ಕನ್ಸುಲೇಟ್ ಗೆ ಆಗಮಿಸಿದ್ದರು. ಆ ಬಳಿಕ ವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಇದಾಗಿ ಸ್ವಲ್ಪ ದಿನಗಳಲ್ಲಿ ಜಮಾಲ್ ಹತ್ಯೆಯಾಗಿರುವುದಾಗಿ ಸೌದಿ ಸರ್ಕಾರ ಒಪ್ಪಿಕೊಂಡಿತ್ತು.
ಇದೊಂದು ಯೋಜಿತ ಹತ್ಯೆ, ಸೌದಿ ಸರ್ಕಾರದ ಪ್ರಮುಖ ಅಧಿಕಾರಿಗಳು ಇದರಲ್ಲಿ ಭಾಗಿಗಳಾಗಿದ್ದಾರೆ ಎಂದು ಟರ್ಕಿ ಆರೋಪಿಸಿದೆ. ಇದೇ ವೇಳೆ ಜಮಾಲ್ ಗೆ ಸೇರಿದ ಎಲ್ಲಾ ದಾಕಲೆಗಲನ್ನು ರಿಯಾದ್, ಪ್ಯಾರಿಸ್ ಹಾಗೂ ವಾಷಿಂಗ್ಟನ್ ಗಳಿಗೆ ಕಳಿಸಿರುವುದಾಗಿ ಟರ್ಕಿ ಅಧ್ಯಕ್ಷರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com