ಫ್ರಾನ್ಸ್ ನಲ್ಲಿ ಭಾರತದಿಂದ ನಿರ್ಮಿಸಿರುವ ಯುದ್ಧ ಸ್ಮಾರಕ ಉದ್ಘಾಟಿಸಿದ ವೆಂಕಯ್ಯನಾಯ್ಡು

ಉತ್ತರ ಫ್ರಾನ್ಸ್ ನಲ್ಲಿ ಭಾರತದಿಂದ ಮೊದಲ ಬಾರಿಗೆ ನಿರ್ಮಿಸಿರುವ ಯುದ್ಧ ಸ್ಮಾರಕವನ್ನು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಇಂದು ಉದ್ಘಾಟಿಸಿದರು.
ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು
ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು

ಫ್ರಾನ್ಸ್ : ಫ್ರಾನ್ಸ್ ನ ಸ್ವಾತಂತ್ರ್ಯಕ್ಕಾಗಿ ನಡೆದ ಮೊದಲ ಮಹಾಯುದ್ಧದಲ್ಲಿ ನಿಸ್ವಾರ್ಥದಿಂದ ಹೋರಾಡಿ ಹುತಾತ್ಮರಾದ ಸಾವಿರಾರು ಭಾರತದ ಸೈನಿಕರ ಸ್ಮರಣಾರ್ಥ ಉತ್ತರ ಫ್ರಾನ್ಸ್ ನಲ್ಲಿ ಭಾರತದಿಂದ  ಮೊದಲ ಬಾರಿಗೆ ನಿರ್ಮಿಸಿರುವ ಯುದ್ಧ ಸ್ಮಾರಕವನ್ನು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಇಂದು ಉದ್ಘಾಟಿಸಿದರು.

ಮೂರು ದಿನಗಳ ಪ್ಯಾರಿಸ್ ಪ್ರವಾಸದಲ್ಲಿರುವ ವೆಂಕಯ್ಯನಾಯ್ಡು ವಿಲಿಯರ್ಸ್ ಗಿಸ್ಲಿನ್ ಬಳಿ ಯುದ್ಧ ಸ್ಮಾರಕ ಉದ್ಘಾಟಿಸಿ ಫ್ರೆಂಚ್ ಸಶಸ್ತ್ರ ಪಡೆಗಳ ಪರಿಣತರು ಮತ್ತು ಮಕ್ಕಳೊಂದಿಗೆ ಸಂವಾದ ನಡೆಸಿದರು.

ಸಾವಿರಾರು ಸೈನಿಕರ  ಸಮರ್ಪಣೆ ವಿಶ್ವಾದ್ಯಂತ ಮಾನ್ಯತೆ ಪಡೆದಿದ್ದು,ಅವರ ಸ್ಮರಣಾರ್ಥ ನಿರ್ಮಿಸಿರುವ ಯುದ್ಧ ಸ್ಮಾರಕ ಉದ್ಘಾಟನೆ ಮಾಡಿದದ್ದು ತಮಗೆ ಅತೀವ ಸಂತೋಷವನ್ನುಂಟುಮಾಡಿದೆ ಎಂದು ವೆಂಕಯ್ಯನಾಯ್ಡು  ತಿಳಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಕಳೆದ ಬಾರಿ ಪ್ಯಾರಿಸ್ ಗೆ  ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಯುದ್ಧ ಸ್ಮಾರಕ ನಿರ್ಮಾಣದ ಘೋಷಣೆ ಮಾಡಿದ್ದರು.

ಭಾರತದ ಯೋಧರು ಫ್ರಾನ್ಸ್, ಬೆಲ್ಜಿಯಂ, ಅರಬೀಯಾ, ಸೇರಿದಂತೆ ವಿಶ್ವದಾದ್ಯಂತ ಯುದ್ಧಭೂಮಿಯಲ್ಲಿ ಹೋರಾಟ ನಡೆಸಿದ್ದು, ಫ್ರಾನ್ಸ್ ಮಣ್ಣು ಮತ್ತು ಸಮಾಜದೊಂದಿಗೆ ಬಾಂಧವ್ಯ ಹಂಚಿಕೊಂಡಿರುವುದಾಗಿ ವೆಂಕಯ್ಯನಾಯ್ಡು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com