ಜಲಾಂತರ್ಗಾಮಿ ನೌಕೆ ಅವಶೇಷ
ಜಲಾಂತರ್ಗಾಮಿ ನೌಕೆ ಅವಶೇಷ

ವರ್ಷದ ಹಿಂದೆ ಕಣ್ಮರೆಯಾಗಿದ್ದ ಅರ್ಜೆಂಟೀನಾದ ಜಲಾಂತರ್ಗಾಮಿ ನೌಕೆಯ ಅವಶೇಷ ಪತ್ತೆ!

ಒಂದು ವರ್ಷದ ಹಿಂದೆ ದಕ್ಷಿಣ ಅಟ್ಲಾಂಟಿಕ್​ ಮಹಾಸಾಗರದಲ್ಲಿ ನಾಪತ್ತೆಯಾಗಿದ್ದ ಅರ್ಜೆಂಟೀನಾದ ಜಲಾಂತರ್ಗಾಮಿ ನೌಕೆಯ ಅವಶೇಷ ಪತ್ತೆಯಾಗಿದೆ ಎಂದು ಅರ್ಜೆಂಟೀನಾ ನೌಕಾಪಡೆ ತಿಳಿಸಿದೆ.

ಬ್ಯೂನಸ್ : ಒಂದು ವರ್ಷದ ಹಿಂದೆ ದಕ್ಷಿಣ  ಅಟ್ಲಾಂಟಿಕ್​ ಮಹಾಸಾಗರದಲ್ಲಿ ನಾಪತ್ತೆಯಾಗಿದ್ದ ಅರ್ಜೆಂಟೀನಾದ ಜಲಾಂತರ್ಗಾಮಿ ನೌಕೆಯ ಅವಶೇಷ ಪತ್ತೆಯಾಗಿದೆ ಎಂದು ಅರ್ಜೆಂಟೀನಾ ನೌಕಾಪಡೆ ತಿಳಿಸಿದೆ.

ಅರ್ಜೆಂಟೀನಾದ ಎಆರ್​ಎ ಸ್ಯಾನ್ ಜುವಾನ್ ಎಂಬ ಜಲಾಂತರ್ಗಾಮಿ  ನೌಕೆ  ಅವಶೇಷಗಳು ಅಟ್ಲಾಂಟಿಕ್​ ಸಾಗರದಲ್ಲಿ 870 ಮೀಟರ್​ ಆಳದಲ್ಲಿ ಪತ್ತೆಯಾಗಿದೆ ಎಂದು  ಅರ್ಜೆಂಟೀನಾದ ನೌಕಪಡೆ ಕ್ಯಾಪ್ಟನ್ ಗೇಬ್ರಿಯಲ್ ಅಟ್ಟಿಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ

ನೌಕನೆಲೆಯ  ಕುಟುಂಬ ಸದಸ್ಯರು ಜುವಾನ್ ಜಲಾಂತರ್ಗಾಮಿ ನೌಕೆಯ ಮೂರು ಪೋಟುಗಳನ್ನು ತೋರಿಸಿದ್ದಾರೆ. ಅಮೆರಿಕಾದ ಕಂಪನಿ ಇದನ್ನು ಪತ್ತೆ ಹಚ್ಚಿದ್ದು, ನೌಕೆಯ ಪರಿಸ್ಥಿತಿ ಅಸ್ಪಷ್ಟವಾಗಿಯೇ ಇದೆ. ಮುಳುಗಿದ ಜಲಾಂತರ್ಗಾಮಿ ನೌಕೆಯನ್ನು ಪತ್ತೆ ಹಚ್ಚಲು ಅರ್ಜೆಂಟೀನಾಕ್ಕೆ ಸಾಧ್ಯವಾಗಿರಲಿಲ್ಲ ಎಂದು ರಕ್ಷಣಾ ಸಚಿವ ಅಸ್ಕರ್ ಅಕ್ವಾಡ್ ತಿಳಿಸಿದ್ದಾರೆ.

2017 ನವೆಂಬರ್ 15 ರಿಂದ ಅರ್ಜೆಂಟೀನಾದ ಕರಾವಳಿಯಿಂದ ಎಆರ್ ಎ ಸ್ಯಾನ್ ಜುವಾನ್  ಜಲಾಂತರ್ಗಾಮಿ ನೌಕೆ ನಾಪತ್ತೆಯಾಗಿತ್ತು. ಜಲಾಂತರ್ಗಾಮಿ ನೌಕೆಯೊಳಗೆ ನೀರು ನುಗ್ಗಿದ್ದರಿಂದ ಅವರ ಬ್ಯಾಟರಿಯಲ್ಲಿ ಶಾರ್ಟ್​ ಸರ್ಕ್ಯೂಟ್​ ಉಂಟಾಗಿ ಸ್ಫೋಟ ಸಂಭವಿಸಿತ್ತು. ಆ ನಂತರ ನೌಕೆ ಸಂಪರ್ಕ ಕಳೆದುಕೊಂಡಿತ್ತು ಎಂದು ನೌಕಾಪಡೆ ಜಲಾಂತರ್ಗಾಮಿ ನೌಕೆ ನಾಪತ್ತೆಯಾಗಿದ್ದ ಸಂದರ್ಭದಲ್ಲಿ ತಿಳಿಸಿತ್ತು.

ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ 11 ರಾಷ್ಟ್ರಗಳ  28 ಹಡಗುಗಳು, 9 ವಿಮಾನಗಳಿಂದ ನಾಪತ್ತೆಯಾಗಿದ್ದ ಜಲಾಂತರ್ಗಾಮಿ ನೌಕೆಯ ಹುಡುಕಾಟ ನಡೆಸಿದ್ದವು.

Related Stories

No stories found.

Advertisement

X
Kannada Prabha
www.kannadaprabha.com