ಉಗಾಂಡಾ: ದೋಣಿ ಮುಳುಗಿ ಕನಿಷ್ಠ 30 ಮಂದಿ ಸಾವು,
ಉಗಾಂಡಾ: ದೋಣಿ ಮುಳುಗಿ ಕನಿಷ್ಠ 30 ಮಂದಿ ಸಾವು,

ಉಗಾಂಡಾ: ದೋಣಿ ಮುಳುಗಿ ಕನಿಷ್ಠ 30 ಮಂದಿ ಸಾವು, ಸಂಭ್ರಮದ ವಿಹಾರದಲ್ಲಿದ್ದವರ ಕೈ ಬೀಸಿ ಕರೆದ ಜವರಾಯ

ವಿಕ್ಟೋರಿಯಾ ಸರೋವರದಲ್ಲಿ ಪ್ರಯಾಣಿಕರ ದೋಣಿ ಮುಳುಗಿದ ಕಾರಣ ಕನಿಷ್ಟ ಮೂವತ್ತು ಜನರು ಸಾವನ್ನಪ್ಪಿದ್ದು 60 ಕ್ಕಿಂತ ಹೆಚ್ಚುಕ್ಕೆ ಗಾಯವಾಗಿರುವ ಘಟನೆ ಆಫ್ರಿಕಾದ ಉಗಾಂಡಾದಲ್ಲಿ ನಡೆದಿದೆ.
ಕಂಪಾಲಾ(ಉಗಾಂಡಾ): ವಿಕ್ಟೋರಿಯಾ ಸರೋವರದಲ್ಲಿ ಪ್ರಯಾಣಿಕರ ದೋಣಿ ಮುಳುಗಿದ ಕಾರಣ ಕನಿಷ್ಟ ಮೂವತ್ತು ಜನರು ಸಾವನ್ನಪ್ಪಿದ್ದು 60 ಕ್ಕಿಂತ ಹೆಚ್ಚುಕ್ಕೆ ಗಾಯವಾಗಿರುವ ಘಟನೆ ಆಫ್ರಿಕಾದ ಉಗಾಂಡಾದಲ್ಲಿ ನಡೆದಿದೆ.
ಘಟನೆಯಲ್ಲಿ ಇದುವರೆಗೆ ಮೂವತ್ತು ದೇಹಗಳನ್ನು ಪತ್ತೆಹಚ್ಚಲಾಗಿದೆ ಮತ್ತು 27 ಜನರನ್ನು ರಕ್ಷಿಸಲಾಗಿದೆ ಎಂದು ಪೋಲೀಸ್ ವಕ್ತಾರ ಝುರಾ ಗನ್ಯಾನಾ ಹೇಳಿದ್ದಾರೆ ದೋಣಿಯು ಸರೋವರ ತೀರದಿಂದ ಸುಮಾರು 150 ಮೀ ದೂರದಲ್ಲಿ ಮುಳುಗಡೆಯಾಗಿದೆ.
ಬದುಕುಳಿದ ಓರ್ವ ವ್ಯಕ್ತಿ ನೀಡಿರುವ ಮಾಹಿತಿಯಂತೆ ದೋಣಿಯಲ್ಲಿ 90ಕ್ಕಿಂತ ಹೆಚ್ಚಿನ ಜನರು ಪ್ರಯಾಣಿಸುತ್ತಿದ್ದರು. 
ಆಫ್ರಿಕಾದ ದೊಡ್ಡ ಸರೋವರಗಳಲ್ಲಿ ಒಂದಾದ ವಿಕ್ಟೋರಿಯಾ ಸರೋವರದಲ್ಲಿ  ಸುಮಾರು 100 ಮಂದಿಯನ್ನು ಸಾಗಿಸುವ ದೋಣಿಯು ಶನಿವಾರದಂದು ವಾಯುಗುಣದ ವೈಪರೀತ್ಯದಿಂದಾಗಿ ಮುಳುಗಡೆಯಾಗಿದೆ. ಇದು ಆಫ್ರಿಕಾ ರಾಷ್ಟ್ರದಲ್ಲಿ ಇತ್ತೀಚೆಗೆ ಸಂಭವಿಸಿದ ಅತಿ ದೊಡ್ಡ ಜಲ ಸಂಬಂಧಿ ದುರಂತವಾಗಿದೆ.
ಈ ಸರೋವರದಲ್ಲಿ ಸಂಗೀತ, ನೃತ್ಯಗಳೊಡನೆ ದೋಣಿ ಸಂಚಾರ ಕೈಗೊಳ್ಳುವುದು ಸಾಕಷ್ತು ಜನಪ್ರಿಯ ಫ್ಯಾಷನ್ ಆಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com