ಭಾರತೀಯ ರಾಯಭಾರ ಕಚೇರಿಯಿಂದ ಕೇವಲ 48 ಗಂಟೆಗಳಲ್ಲಿ ಪಾಸ್ ಪೋರ್ಟ್!

ಇನ್ನು ಮುಂದೆ ವಿಶ್ವದ ಯಾವುದೇ ದೇಶಗಳಲ್ಲಿ ಭಾರತೀಯ ರಾಯಭಾರ ಕಚೇರಿ ನಾಗರಿಕರಿಗೆ ಕೇವಲ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಇನ್ನು ಮುಂದೆ ವಿಶ್ವದ ಯಾವುದೇ ದೇಶಗಳಲ್ಲಿ ಭಾರತೀಯ ರಾಯಭಾರ ಕಚೇರಿ ನಾಗರಿಕರಿಗೆ ಕೇವಲ 48 ಗಂಟೆಗಳಲ್ಲಿ ಪಾಸ್ ಪೋರ್ಟ್ ನೀಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಕೆ ಸಿಂಗ್ ತಿಳಿಸಿದ್ದಾರೆ.

ವಾಷಿಂಗ್ಟನ್ ನಲ್ಲಿ ಭಾರತೀಯ ರಾಯಭಾರ ಕಚೇರಿಯಲ್ಲಿ ಪಾಸ್ ಪೋರ್ಟ್ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ದೂತಾವಾಸ ಕಚೇರಿಯಲ್ಲಿ ಪಾಸ್ ಪೋರ್ಟ್ ಕಚೇರಿಗಳು ಅಂಕಿಅಂಶ ಕೇಂದ್ರಗಳ ಜೊತೆ ಡಿಜಿಟಲ್ ಸಂಪರ್ಕ ಹೊಂದಿದ್ದು ಅದರ ಮೂಲಕ ಪಾಸ್ ಪೋರ್ಟ್ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುವುದು ಎಂದರು.
ಈ ವಾರದ ಆರಂಭದಲ್ಲಿ ನ್ಯೂಯಾರ್ಕ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ವ್ಯಕ್ತಿ ಅರ್ಜಿ ಹಾಕಿದ 48 ಗಂಟೆಗಳೊಳಗೆ ಪಾಸ್ ಪೋರ್ಟ್ ನೀಡಲಾಗಿತ್ತು.

ಈ ಸೌಲಭ್ಯ ವಿಶ್ವಾದ್ಯಂತ ಎಲ್ಲಾ ದೇಶಗಳಿಗೂ ವಿಸ್ತರಣೆಯಾಗಲಿದೆ ಎಂದು ವಿ ಕೆ ಸಿಂಗ್ ತಿಳಿಸಿದರು.

ಮುಂದಿನ ದಿನಗಳಲ್ಲಿ ಭಾರತ ವಿಶ್ವದಲ್ಲಿಯೇ ಉತ್ತಮ ಪಾಸ್ ಪೋರ್ಟ್ ಸೇವೆ ನೀಡುವ ದೇಶವಾಗಲಿದ್ದು ಪಾಸ್ ಪೋರ್ಟ್ ಅರ್ಜಿಯನ್ನು ಮತ್ತಷ್ಟು ಸುಲಭ ಮತ್ತು ಸರಳಗೊಳಿಸಲಾಗುವುದು.ಅರ್ಜಿಯಲ್ಲಿನ ಅನೇಕ ಮಾಹಿತಿಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದರು.

ಕಳೆದ ತಿಂಗಳು ಇಂಗ್ಲೆಂಡ್ ನಲ್ಲಿ ಪಾಸ್ ಪೋರ್ಟ್ ಸೇವಾ ಯೋಜನೆ ಆರಂಭವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com