ಕಾಬೂಲ್: ಅಫಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರ ಅಟ್ಟಹಾಸಕ್ಕೆ 22 ಪೊಲೀಸರು ಮತ್ತು ಹತ್ತು ಮಂದಿ ಯೋಧರು ಹುತಾತ್ಮರಾಗಿದ್ದಾರೆ.
ಪಶ್ಚಿಮ ಅಫಘಾನಿಸ್ತಾನಫರಾಹ್ ಪ್ರಾಂತ್ಯದಲ್ಲಿ ನಡೆದ ಘಟನೆಯಲ್ಲಿ ಪೋಲೀಸ್ ವಾಹನದ ಮೇಲೆ ಉಗ್ರ ದಾಳಿ ನಡೆದಿದೆ.ಈ ವೇಳೆ ಸ್ಥಳದಲ್ಲಿಏ 20 ಪೋಲೀಸರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ಉಗ್ರ ದಾಳಿಯ ಹೊಣೆ ಹೊತ್ತ ತಾಲಿಬಾನ್ ಸಂಘಟನೆ 25 ಪೋಲೀಸರನ್ನು ಹೊಡೆದು ಹಾಕಿರುಯ್ವುದಾಗಿ ಘೋಷಿಸಿಕೊಂಡಿದೆ. "ನಾಲ್ಕು ಪೋಲೀಸ್ ವಾಹನಗಳನ್ನು ದ್ವಂಸ ಮಾಡಿ ಅಪಾರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದೇವೆ" ಎಂದು ಉಗ್ರ ಸಂಘಟನೆ ಸಂದೇಶದಲ್ಲಿ ಹೇಳಿದೆ.
ಇದೇ ವೇಳೆ , ಉತ್ತರ ಪರ್ಯಾಬ್ ಪ್ರಾಂತದಲ್ಲಿ ನಡೆದ ಪ್ರಕರಣದಲ್ಲಿ ಸೇನಾ ಚೆಕ್‌ಪೋಸ್ಟ್ ಮೇಲೆ ಮುಗಿಬಿದ್ದ ಉಗ್ರರು ಗುಂಡಿನ ದಾಳಿ ನಡೆಸಿ 10 ಯೋಧರನ್ನು ಕೊಂದು ಹಾಕಿದ್ದಾರೆ. ಸೋಮವಾರ ನಡೆದ ಘಟನೆಯಲ್ಲಿ ಉಗ್ರರ ಮುಖಂಡ ಅಬ್ದುಲ್ ಘನಿ ಅಲಿಪೂರ್ ಬಂಧನವನ್ನು ಖಂಡಿಸಿ ಭೀಕರ ದಾಳಿ ನಡೆಸ;ಲಾಗಿದೆ.
ಘನಿ ಬಂಧನ ವಿರೋಧಿಸಿ ಅಫಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಸತತ ಎರಡನೇ ದಿನ ಪ್ರಭಟನೆಗಳು ನಡೆದಿದ್ದು ಈ ವೇಳೆ ಭಯೋತ್ಪಾದಕ ದಾಳಿ ಅಹ ನಡೆದಿರುವುದುಗಮನಾರ್ಹ.