ಮೊದಲ ಬಾರಿಗೆ ತೃತೀಯ ಲಿಂಗಿ ವ್ಯಕ್ತಿಗೆ ಚಾಲನಾ ಪರವಾನಗಿ ನೀಡಿದ ಪಾಕ್!

ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ವಾಹನ ಚಾಲನೆ ಪರವಾನಗಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕ್ ಸಂಚಾರಿ ಅಧಿಕಾರಿಗಳು....
ಲೈಲಾ ಅಲಿ,
ಲೈಲಾ ಅಲಿ,
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ವಾಹನ ಚಾಲನೆ ಪರವಾನಗಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕ್ ಸಂಚಾರಿ ಅಧಿಕಾರಿಗಳು ದೇಶದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರಿಗೆ ಚಾಲನಾ ಪರವಾನಗಿ ನೀಡಿದ್ದಾಗಿ ಮಾದ್ಯಮಗಳು ವರದಿ ಮಾಡಿದೆ.
ಪಾಕ್ ರಾಜಧಾನಿ ಇಸ್ಲಾಮಾಬಾದ್ ಸಂಚಾರಿ ಪೋಲೀಸರು ತೃತೀಯ ಲಿಂಗಿ ಲೈಲಾ ಅಲಿ ಎನ್ನುವವರಿಗೆ ವಿಶೇಷ ನಿರ್ದೇಶನಗಳೊಡನೆ ಪರವಾನಗಿ ವಿತರಿಸಿದ್ದಾರೆ. ವಿಶೇಷವೆಂದರೆ ಅವರು ಇದಕ್ಕೆ ಮುನ್ನ ಪರವಾನಗಿ ಇಲ್ಲದೆ ದಶಕಗಳ ಕಾಲ ವಾಹನ ಚಾಲನೆ ಮಾಡುತಿದ್ದರು!
ತೃತೀಯ ಲಿಂಗಿಗಳ ಸಮಸ್ಯೆ ಕುರಿತು ಪೋಲೀಸರಿಗೆ ಸಹ ಮಾಹಿತಿ ನಿಡಿರುವ ಬಗ್ಗೆ ಲೈಲಾ ಅಲಿಮಾದ್ಯಮಗಳಲ್ಲಿ ವಿವರಿಸಿದ್ದಾರೆ.ಆಗ ಪೋಲೀಸ್ ಆಯುಕ್ತರು ತಮ್ಮ ಸಮುದಾಯದ ಸಮಸ್ಯೆಯನ್ನು ಇವಾರಿಸಿ ತನಗೆ ವಾಹನ ಚಾಲನೆ ಪರವಾನಗಿ ನೀಡುವುದಾಗಿ ಹೇಳಿದ್ದರೆಂದು ಅವರು ವಿವರಿಸಿದರು.
ಪಾಕಿಸ್ತಾನದಲ್ಲಿ ಒಟ್ಟಾರೆ  5,00,000 ತೃತೀಯ ಲಿಂಗಿಗಳಿದ್ದು ಇಲ್ಲಿನ ಆಡಳಿತ ಇದೇ ಮೊದಲ ಬಾರಿಗೆ ಆ ಸಮುದಾಯದ ವ್ಯಕ್ತಿಗೆ ಚಾಲನಾ ಪರವಾನಗಿ ಮಂಜೂರು ಮಾಡಿದೆ.
ಕಳೆದ ಮೇನ ಲ್ಲಿ ಪಾಕ್ ಸರ್ಕಾರ ತೃತೀಯಲಿಂಗಿಗಳ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಇದರಿಂದ ಆ ಸಮುದಾಯದ ಜನರಿಗೆ ವಿಶೇಷ ರಕ್ಷಣೆ ದೊರಕಿದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com