ಕೇರಳ ಪ್ರವಾಹ ರಕ್ಷಣೆ: ಭಾರತೀಯ ನೌಕಾಪಡೆ ಕಮಾಂಡರ್, ಕ್ಯಾಪ್ಟನ್ ಗೆ 'ಏಷ್ಯನ್ ಆಫ್ ದಿ ಇಯರ್ 'ಪ್ರಶಸ್ತಿ

ಕೇರಳದ ಪ್ರವಾಹದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಜನರನ್ನು ರಕ್ಷಿಸಿದ್ದ ಭಾರತೀಯ ನೌಕ ಕಮಾಂಡರ್ ಹಾಗೂ ಕ್ಯಾಪ್ಟನ್ ಗೆ 'ಏಷ್ಯನ್ ಆಫ್ ದಿ ಇಯರ್ 'ಪ್ರಶಸ್ತಿ ಸಂದಿದೆ.
ಕೇರಳದ ಪ್ರವಾಹದ ಚಿತ್ರ
ಕೇರಳದ ಪ್ರವಾಹದ ಚಿತ್ರ

ಸಿಂಗಾಪುರ: ಕೇರಳದ ಪ್ರವಾಹದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಜನರನ್ನು ರಕ್ಷಿಸಿದ್ದ ಭಾರತೀಯ ನೌಕ ಕಮಾಂಡರ್ ಹಾಗೂ ಕ್ಯಾಪ್ಟನ್  ಗೆ 'ಏಷ್ಯನ್  ಆಫ್ ದಿ ಇಯರ್ 'ಪ್ರಶಸ್ತಿ  ಸಂದಿದೆ.

ನೌಕಾಪಡೆಯ ಕಮಾಂಡರ್  ವಿಜಯ್ ವರ್ಮಾ ಹಾಗೂ ಕ್ಯಾಪ್ಟನ್  ಪಿ. ರಾಜ್ ಕುಮಾರ್  ಅವರು ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

42 ವರ್ಷದ ಕಮಾಂಡರ್ ವರ್ಮಾ, ಕೊಚ್ಚಿಯಲ್ಲಿ  ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದ ತುಂಬು ಗರ್ಭೀಣಿಯನ್ನು ಹೆಲಿಕಾಪ್ಟರ್ ಸಹಾಯದಿಂದ ರಕ್ಷಿಸಿದ್ದರು. ನಂತರ ಅವರು ಮಗುವಿಗೆ ಜನ್ಮ ನೀಡಿದ್ದರು. ವರ್ಮಾ ಅವರ ಈ ಅಪ್ರತಿಮ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು.

ಮತ್ತೊಂದೆಡೆ ಕೊಚ್ಚಿಯಲ್ಲಿ ಮರಗಳು ಹಾಗೂ ಇತರ ಮನೆಗಳ ಮೇಲ್ಛಾವಣೆಯಲ್ಲಿದ್ದ  26 ಮಂದಿಯನ್ನು  ಕ್ಯಾಪ್ಟನ್ ರಾಜ್ ಕುಮಾರ್  ರಕ್ಷಿಸಿದ್ದರು.

ತುಂಬು ಗರ್ಭೀಣಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.  32 ಜನರನ್ನು ರಾಜ್ ಕುಮಾರ್ ರಕ್ಷಿಸಿದ್ದರು.

ಆಗಸ್ಟ್ ತಿಂಗಳಲ್ಲಿ ಜಲಪ್ರಳಯದಿಂದಾಗಿ ದ್ವೀಪದಂತಾಗಿದ್ದ ಕೇರಳದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜನರನ್ನು ಡಜನ್ ಗೂ ಹೆಚ್ಚು ಹೆಲಿಕಾಪ್ಟರ್ ಗಳಿಂದ ಭಾರತೀಯ ನೌಕ ಪಡೆ ಪೈಲಟ್ ಗಳು ರಕ್ಷಿಸಿದ್ದರು. ಸಂಕಷ್ಟ ಸಂದರ್ಭದಲ್ಲಿ ಅಪ್ರತಿಮ ಸಾಹಸ ತೋರಿದ ಅನೇಕ ಪುರುಷರು ಹಾಗೂ ಮಹಿಳೆಯರಿಗೆ ಪ್ರಶಸ್ತಿ ನೀಡಿರುವುದಾಗಿ  ಸ್ಟ್ರೈಟ್ಸ್  ಟೈಮ್ಸ್ ಡೈಲಿ ಸಂಪಾದಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಂಡೊನೇಷ್ಯಾದ ಸುಳಾವೆಸಿಯಲ್ಲಿ ಭೂಕಂಪದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ಮೂಲಕ ಹಲವರನ್ನು ರಕ್ಷಿಸಿದ್ದ ಸಿಂಗಾಪುರದ ನಗ್ ಕೊಕ್ ಚೂಂಗ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com