ನ್ಯೂಯಾರ್ಕ್: ಕ್ಯಾನ್ಸರ್ ಗೆ ಚಿಕಿತ್ಸೆ ಪತ್ತೆ ಹಚ್ಚಿದ ಸಂಶೋಧಕರಿಗೆ ಶರೀರಶಾಸ್ತ್ರ ಅಥವಾ ಔಷಧ ವಿಭಾಗದಲ್ಲಿ ಈ ಬಾರಿಯ ಪ್ರತಿಷ್ಠಿತ ನೊಬೆಲ್ ಪಾರಿತೋಷಕಕ್ಕೆ ಆಯ್ಕೆ ಮಾಡಲಾಗಿದೆ.
ಅಮೆರಿಕಾದ ಜೇಮ್ಸ್ ಪಿ. ಅಲಿಸನ್ ಮತ್ತು ಜಪಾನಿನ ತಸುಕು ಹೊಂಜೊ ಜಂಟಿಯಾಗಿ ನೊಬೆಲ್ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ವಿಧದ ಅವರ ಕೆಲಸಕ್ಕೆ ವಿಶ್ವ ಪ್ರತಿಷ್ಠಿತ ಪ್ರಶಸ್ತಿ ದೊರಕಿದೆ.