ವಿದೇಶಿ ಭಾರತೀಯ ಸಮುದಾಯದ ಜೊತೆ ಸಂಪರ್ಕ ಈಗ ಇನ್ನಷ್ಟ ಗಟ್ಟಿ: ರಾಷ್ಟ್ರಪತಿ ಕೋವಿಂದ್
ದುಶಂಬೆ (ತಜಿಕಿಸ್ತಾನ್): ಸಾಗರೋತ್ತರ ಭಾರತೀಯರೊಂದಿಗೆ ಸಂಪರ್ಕಿಸುವ ಭಾರತ ಸರ್ಕಾರದ ಕಾರ್ಯತಂತ್ರ ಇತ್ತೀಚಿನ ವರ್ಷಗಳಲ್ಲಿ ಮಹತ್ತರ ಬದಲಾವಣೆಯಾಗಿದ್ದು ಭಾರತೀಯರ ಭಾವನಾತ್ಮಕ, ಸಾಂಸ್ಕ್ರೃತಿಕ, ಆರ್ಥಿಕ ಮತ್ತು ಸಾಂಸ್ಥಿಕ ಸಂಬಂಧಗಳು ಸಾಗರೋತ್ತರ ಭಾರತೀಯರ ಜೊತೆ ಇನ್ನಷ್ಟು ಗಟ್ಟಿಯಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಅವರು ನಿನ್ನೆ ತಜಿಕಿಸ್ತಾನದಲ್ಲಿ ಭಾರತದ ರಾಯಭಾರಿ ಸೋಮನಾಥ್ ಘೋಷ್ ಏರ್ಪಡಿಸಿದ್ದ ಫ್ರೆಂಡ್ಸ್ ಆಫ್ ಇಂಡಿಯಾ ಇನ್ ತಜಿಕಿಸ್ತಾನ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಇಲ್ಲಿರುವ ಭಾರತೀಯರಿಗೆ ಭಾರತ ಸರ್ಕಾರ ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡಲಿದೆ. ಸಾಗರೋತ್ತರ ಭಾರತೀಯರಿಗೆ ಅಗತ್ಯವಿರುವ ಸಂದರ್ಭಗಳಲ್ಲೆಲ್ಲಾ ಭಾರತ ಸರ್ಕಾರ ನೆರವಾಗಲಿದೆ ಎಂದರು.
ತಜಿಕಿಸ್ತಾನದಲ್ಲಿರುವ ಭಾರತೀಯರ ಕೆಲಸಗಳನ್ನು ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಶ್ಲಾಘಿಸಿದರು. ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪುರಸ್ಕಾರವನ್ನು ಈ ವರ್ಷ ಶಿಕ್ಷಣ ಮತ್ತು ಸಾಹಿತ್ಯದಲ್ಲಿ ಅತ್ಯಮೂಲ್ಯ ಕೊಡುಗೆ ನೀಡಿದ ಪ್ರೊಫೆಸರ್ ಹಬಿಬುಲ್ಲೊ ರಜಬಾವೊ ಅವರಿಗೆ ನೀಡಲಾಗಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ