ನಿರ್ವಹಣೆ ದುರಸ್ತಿ ಕಾರ್ಯ: ವಿಶ್ವಾದ್ಯಂತ ಒಂದೆರಡು ದಿನ ಇಂಟರ್ನೆಟ್ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಸಾಧ್ಯತೆ

ಅಂತರ್ಜಾಲ ಸಂಪರ್ಕ ಪೂರೈಸುವ ಸರ್ವರ್ ನಲ್ಲಿ ದುರಸ್ತಿ ಕಾರ್ಯ ನಡೆಯಲಿರುವುದರಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಅಂತರ್ಜಾಲ ಸಂಪರ್ಕ ಪೂರೈಸುವ ಸರ್ವರ್ ನಲ್ಲಿ ದುರಸ್ತಿ ಕಾರ್ಯ ನಡೆಯಲಿರುವುದರಿಂದ ಮುಂದಿನ 48 ಗಂಟೆಗಳ ಒಳಗೆ ಅಂತರ್ಜಾಲ ಪೂರೈಕೆಯಲ್ಲಿ ವ್ಯತ್ಯಯವುಂಟಾಗಬಹುದು.

ಅಂತರ್ಜಾಲ ಪೂರೈಸುವ ಪ್ರಮುಖ ಸರ್ವರ್ ನಲ್ಲಿ ಕೆಲವು ಮೂಲಭೂತ ಕೆಲಸಗಳು ಮತ್ತು ದುರಸ್ತಿ ಕಾರ್ಯ ನಡೆಸಲಿರುವುದರಿಂದ ಮುಂದಿನ ಎರಡು ದಿನಗಳಲ್ಲಿ ಇಂಟರ್ನೆಟ್ ಸಂಪರ್ಕದಲ್ಲಿ ಸ್ವಲ್ಪ ಸಮಯ ವ್ಯತ್ಯಯವುಂಟಾಗಬಹುದು ಎಂದು ರಷ್ಯಾ ತಿಳಿಸಿದೆ.
ಇಂಟರ್ನೆಟ್ ಕಾರ್ಪೊರೇಷನ್ ಆಫ್ ಅಸ್ಸೈನ್ ಡ್ ನೇಮ್ಸ್ ಅಂಡ್ ನಂಬರ್ಸ್ (ಐಕಾನ್ನ್ ) ದುರಸ್ತಿ ಕಾರ್ಯ ಕೈಗೊಳ್ಳಲಿದ್ದು ಈ ಸಂದರ್ಭದಲ್ಲಿ ಕ್ರಿಪ್ಟೊಗ್ರಾಫಿಕ್ ಕೀಯನ್ನು ಬದಲಾಯಿಸಲಿದೆ. ಇದು ಡೊಮೈನ್ ನೇಮ್ ಸಿಸ್ಟಮ್ ಗೆ ಸಹಾಯ ಮಾಡುತ್ತದೆ. ಸೈಬರ್ ದಾಳಿಯನ್ನು ತಡೆಯಲು ಇದು ಪ್ರಮುಖವಾಗಿ ಸಹಾಯ ಮಾಡುವ ಸಾಧನವಾಗಿದೆ ಎಂದು ಐಕಾನ್ನ್ ತಿಳಿಸಿದೆ.

ಈ ಬಗ್ಗೆ ಹೇಳಿಕೆ ಹೊರಡಿಸಿರುವ ಸಂವಹನ ನಿಯಂತ್ರಣ ಪ್ರಾಧಿಕಾರ(ಸಿಆರ್ ಎ), ಸುರಕ್ಷಿತ, ಸ್ಥಿರ ಡಿಎನ್ ಎಸ್ ಗೆ ದುರಸ್ತಿ ಕಾರ್ಯ ಮಾಡಲು ಜಾಗತಿಕ ಮಟ್ಟದಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕೆಲ ಹೊತ್ತು ಕಡಿತ ಮಾಡುವ ಅವಶ್ಯಕತೆಯಿದೆ. ನೆಟ್ ವರ್ಕ್ ಪೂರೈಕೆದಾರರು ಅಥವಾ ಇಂಟರ್ನೆಟ್ ಸೇವಾ ಪೂರೈಕೆದಾರರು ಇದಕ್ಕೆ ಸಿದ್ದತೆ ಮಾಡಿಕೊಳ್ಳದಿದ್ದರೆ ಕೆಲವು ಇಂಟರ್ನೆಟ್ ಬಳಕೆದಾರರಿಗೆ ಇದರಿಂದ ಪರಿಣಾಮ ಬೀರಲಿದೆ.
ಆದರೆ ಸರಿಯಾದ ಸಿಸ್ಟಮ್ ಸೆಕ್ಯುರಿಟಿ ಎಕ್ಸ್ಟ್ ನ್ಷನ್ ಹೊಂದಿದ್ದರೆ ಈ ಸಮಸ್ಯೆಯನ್ನು ತಡೆಗಟ್ಟಬಹುದು ಎಂದು ಹೇಳಿದೆ.

ಮುಂದಿನ 48 ಗಂಟೆಗಳಲ್ಲಿ ಕೆಲವು ವೆಬ್ ಸೈಟ್ ಪೇಜ್ ಗಳು ಸಿಗದೆ ಅಥವಾ ವಹಿವಾಟು ನಡೆಸಲು ಸಾಧ್ಯವಾಗದಿರಬಹುದು. ಹಳೆಯ ಇಂಟರ್ನೆಟ್ ಸರ್ವಿಸ್ ಬಳಕೆಯನ್ನು ಉಪಯೋಗಿಸುತ್ತಿರುವವರಿಗೆ ಇಂಟರ್ನೆಟ್ ಸಿಗದಿರಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com