
ಕೊಲಂಬೊ: ಶುಕ್ರವಾರ ಶ್ರೀಲಂಕಾ ಸರ್ಕಾರದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅಲ್ಲಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಂದ ಅಧಿಕಾರ ಪಡೆದು ನೂತನ ಪ್ರಧಾನಿಯಾಗಿ ಮಹಿಂದಾ ರಾಜಪಕ್ಷ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜಪಕ್ಷ ಅವರ ಅಧಿಕಾರಾವಧಿಯ ಬಗ್ಗೆ ಸ್ಪಷ್ಟತೆಯಿಲ್ಲ.
ಸಮ್ಮಿಶ್ರ ಸರ್ಕಾರದಿಂದ ಸಿರಿಸೇನಾ ಅವರ ಪಕ್ಷ ಹೊರಬಂದ ನಂತರ ರಾಜಪಕ್ಷ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಮೈತ್ರಿ ಸರ್ಕಾರದಿಂದ ಯುನೈಟೆಡ್ ಪೀಪಲ್ಸ್ ಫ್ರೀಡಂ ಅಲೈಯನ್ಸ್ (ಯುಪಿಎಫ್ಎ)ಹೊರಬಂದಿದೆ ಎಂದು ಸಿರಿಸೇನಾ ಸರ್ಕಾರದಲ್ಲಿದ್ದ ಕೃಷಿ ಸಚಿವ ಮಹಿಂದಾ ಅಮರವೀರ ತಿಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
ಹಿಂದಿನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅಥವಾ ಅವರ ಕಚೇರಿಯಿಂದ ಈ ಬೆಳವಣಿಗೆ ಬಗ್ಗೆ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
Advertisement