ಕೊಲಂಬೊ: ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಉಚ್ಚಾಟಿತ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರೇ ಈಗಲೂ ಪ್ರಧಾನಿ ಎಂದು ಶ್ರೀಲಂಕಾ ಸಂಸತ್ ಸ್ಪೀಕರ್ ಕರು ಜಯಸೂರ್ಯ ಅವರು ಗುರುತಿಸಿದ್ದಾರೆ.
ಜಯಸೂರ್ಯ ಅವರು ಈ ಸಂಬಂಧ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ಪತ್ರ ಬರೆದಿದ್ದು, ನವೆಂಬರ್ 16ರವರೆಗೆ ಸಂಸತ್ ಕಲಾಪ ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿದ್ದಾರೆ.
ವಿಕ್ರಮಸಿಂಘೆ ಅವರು ಜನಾದೇಶ ಪಡೆದಿದ್ದು, ಅವರನ್ನೇ ಪ್ರಧಾನಿಯಾಗಿ ಪುನರ್ ಸ್ಥಾಪಿಸಿ. ಈ ಮೂಲಕ ಪ್ರಜಾಪ್ರಭುತ್ವ ಮತ್ತು ಉತ್ತಮ ಸರ್ಕಾರ ರಕ್ಷಿಸುವಂತೆ ಸ್ಪೀಕರ್ ಸಿರಿಸೇನಾ ಅವರಿಗೆ ಮನವಿ ಮಾಡಿದ್ದಾರೆ. ಅಲ್ಲದೆ ಸಂಸತ್ ಅಮಾನತುಗೊಳಿಸಿರುವುದು ಅನಪೇಕ್ಷಿತ ಎಂದಿದ್ದಾರೆ.
ಸಿರಿಸೇನಾ ಅವರು ಕಳೆದ ಶುಕ್ರವಾರ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಉಚ್ಚಾಟಿಸಿ, ಮಹಿಂದ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದಾರೆ.