ಪಾಕಿಸ್ತಾನದ ನೂತನ ಅಧ್ಯಕ್ಷರಾಗಿ ಪಿಟಿಐ ಪಕ್ಷದ ಅರಿಪ್ ಅಲ್ವಿ ಆಯ್ಕೆ

ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರರಿಕ್ -ಇ- ಇನ್ಸಾಫ್ ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಡಾ. ಅರಿಪ್ ಅಲ್ವಿ ಪಾಕಿಸ್ತಾನದ ನೂತನ ಅಧ್ಯಕ್ಷರಾಗಿ ಇಂದು ಆಯ್ಕೆಯಾಗಿದ್ದಾರೆ.
ಡಾ. ಅರಿಪ್ ಅಲ್ವಿ
ಡಾ. ಅರಿಪ್ ಅಲ್ವಿ

ಇಸ್ಲಾಮಾಬಾದ್ : ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರರಿಕ್ -ಇ- ಇನ್ಸಾಫ್  ಪಕ್ಷದ ಸಂಸ್ಥಾಪಕ  ಸದಸ್ಯರಲ್ಲಿ ಒಬ್ಬರಾಗಿದ್ದ ಡಾ. ಅರಿಪ್ ಅಲ್ವಿ  ಪಾಕಿಸ್ತಾನದ ನೂತನ ಅಧ್ಯಕ್ಷರಾಗಿ ಇಂದು ಆಯ್ಕೆಯಾಗಿದ್ದಾರೆ.

 ಪಾಕಿಸ್ತಾನದ 13 ನೇ  ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ  ಪಾಕಿಸ್ತಾನ ಪೀಪಲ್ಸ್ ಪಾರ್ಟಿಯಿಂದ ಐಟ್ಜಾಜ್ ಅಹ್ಸಾನ್ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್ ( ಎನ್  ) ಪಕ್ಷದಿಂದ ಮೌಲಾನಾ ಫಜಲ್ ಉರ್ ರೆಹಮಾನ್ ಸ್ಪರ್ಧಿಸಿದ್ದರು. ಅವರೆಲ್ಲರನ್ನೂ ಸೋಲಿಸಿ ಡಾ. ಅರಿಪ್ ಅಲ್ವಿ ನೂತನ ರಾಷ್ಟ್ರಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಸೆನೆಟ್ ಮತ್ತು ನ್ಯಾಷನಲ್ ಆಸೆಂಬ್ಲಿಯಲ್ಲಿ ಒಟ್ಟಾರೆಯಾಗಿ 430 ಮತಗಳು ಚಲಾವಣೆಗೊಂಡಿದ್ದವು. ಅಲ್ವಿ 212 ಮತಗಳನ್ನು ಪಡೆದರೆ,  ರೆಹಮಾನ್ 131 ಹಾಗೂ ಅಹ್ಸಾನ್  81 ಮತಗಳನ್ನು ಪಡೆದುಕೊಂಡರು. ಆರು ಮತಗಳು ತಿರಸ್ಕೃತಗೊಂಡವು ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಬಲೊಚಿಸ್ತಾನದಿಂದ ನೂತನವಾಗಿ ಆಯ್ಕೆಯಾಗಿದ್ದ 60 ಶಾಸಕರ ಪೈಕಿ 45 ಮಂದಿ ಅಲ್ವಿ ಪರವಾಗಿ  ಮತ ಚಲಾಯಿಸಿದರು ಎಂದು ಅದು ಹೇಳಿದೆ.

ಪಿಪಿಪಿ ಪ್ರಾಬಲ್ಯವಿರುವ ಸಿಂಧು ಆಸೆಂಬ್ಲಿಯಲ್ಲಿ ಅಹ್ಸಾನ್ 100 ಮತಗಳನ್ನು ಪಡೆದಿದ್ದರೆ, ಅಲ್ವಿ 56 ಮತಗಳನ್ನು ಪಡೆದಿದ್ದಾರೆ.  ರೆಹಮಾನ್  ಪರವಾಗಿಯೂ ಮತಗಳು ಬಿದ್ದಿವೆ. ಖೈಬರ್ ಪಾಕ್ತುಂಕ್ವಾ ಆಸೆಂಬ್ಲಿಯಲ್ಲಿ ಅಲ್ವಿ  78, ರೆಹಮಾನ್ ಹಾಗೂ ಅಹ್ಸಾನ್ 26 ಮತಗಳನ್ನು ಪಡೆದಿದ್ದಾರೆ.

ಪಾಕಿಸ್ತಾನದಲ್ಲಿ ಅಧ್ಯಕ್ಷರನ್ನು ಒಕ್ಕೂಟದ ಸಂಕೇತವಾಗಿ ಪರಿಗಣಿಸಲಾಗುತ್ತದೆ ಮತ್ತು ರಾಜ್ಯದ ಮುಖ್ಯಸ್ಥರಾಗಿದ್ದು, ಪ್ರಧಾನಮಂತ್ರಿ ಶಿಫಾರಸ್ಸಿನ ಮೇರೆಗ ಎಲ್ಲಾ  ಅಧಿಕಾರವನ್ನು ಚಲಾಯಿಸಬೇಕಾಗುತ್ತದೆ.

ನಿರ್ಗಮಿತ ಅಧ್ಯಕ್ಷ ಮ್ಯಾಮ್ ನೂನ್ ಹುಸೈನ್ ಅವರ ಅಧಿಕಾರವಧಿ ಸೆಪ್ಟೆಂಬರ್ 8 ಕ್ಕೆ ಅಂತ್ಯಗೊಳ್ಳಲಿದೆ. 69 ವರ್ಷದ ಡಾ. ಅರಿಪ್ ಅಲ್ವಿ  ಪಿಐಟಿನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದು, 2006ರಿಂದ 2013ರವರೆಗೂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

2013ರಲ್ಲಿ  ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ  ನ್ಯಾಷನಲ್ ಆಸೆಂಬ್ಲಿಯ ಸದಸ್ಯರಾಗಿ ಅರಿಪ್ ಅಲ್ವಿ  ಚುನಾಯಿತರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com