1376 ಕೋಟಿ ರು.ಗೆ ಸೇಲ್ಸ್ ಪೋರ್ಸ್ ಪಾಲಾದ 'ಟೈಮ್ ಮ್ಯಾಗಝಿನ್ '

ಪ್ರಖ್ಯಾತ ಆಂಗ್ಲ ನಿಯತಕಾಲಿಕೆ "ಟೈಮ್ ಮ್ಯಾಗಝಿನ್" ಅನ್ನು ಮೆರಿಡಿಕ್ ಕಾರ್ಪ್ ಸಂಸ್ಥೆ ಸೇಲ್ಸ್ ಪೋರ್ಸ್ ಸಹ ಸಂಸ್ಥಾಪಕರಾದ ಮಾರ್ಕ್ ಬೆನಿಯೋಫ್ ಹಾಗೂ ಅವರ ಪತ್ನಿಗೆ....
1376 ಕೋಟಿ ರು.ಗೆ ಸೇಲ್ಸ್ ಪೋರ್ಸ್ ಪಾಲಾದ 'ಟೈಮ್ ಮ್ಯಾಗಝಿನ್ '
1376 ಕೋಟಿ ರು.ಗೆ ಸೇಲ್ಸ್ ಪೋರ್ಸ್ ಪಾಲಾದ 'ಟೈಮ್ ಮ್ಯಾಗಝಿನ್ '
ನ್ಯೂಯಾರ್ಕ್: ಪ್ರಖ್ಯಾತ ಆಂಗ್ಲ ನಿಯತಕಾಲಿಕೆ "ಟೈಮ್ ಮ್ಯಾಗಝಿನ್" ಅನ್ನು ಮೆರಿಡಿಕ್ ಕಾರ್ಪ್ ಸಂಸ್ಥೆ ಸೇಲ್ಸ್ ಪೋರ್ಸ್ ಸಹ ಸಂಸ್ಥಾಪಕರಾದ ಮಾರ್ಕ್ ಬೆನಿಯೋಫ್ ಹಾಗೂ ಅವರ ಪತ್ನಿಗೆ 190 ಮಿಲಿಯನ್ ಅಮೆರಿಕನ್ ಡಾಲರ್ (1376 ಕೋಟಿ ರು) ಗೆ ಮಾರಾಟ ಮಾಡಿದೆ.
ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರದ ದಿಗ್ಗಜ ಸಂಸ್ಥೆಯಾದ ಸೇಲ್ಸ್ ಪೋರ್ಸ್ ಸಂಸ್ಥೆಯ ನಾಲ್ವರು ಸಂಸ್ಥಾಪಕರಲ್ಲಿ ಒಬ್ಬರಾದ ಬೆನಿಯೋಫ್ ಖರೀದಿಸುತ್ತಿದ್ದಾರೆ ಎಂದು ಭಾನುವಾರ ಘೋಷಿಸಲಾಯಿತು.
ಮೆರೆಡಿತ್ ಸಂಸ್ಥೆಯು "ಟೈಮ್ ಇಂಕ್" ಸಂಸ್ಥೆಯ ಖರೀದಿಯನ್ನು ಪೂರ್ಣಗೊಳಿಸಿದ ಬಳಿಕ ಎಂದರೆ ಸುಮಾರು ಎಂಟು ತಿಂಗಳ ಅವಧಿಯಲ್ಲಿ ಈ ಮಾರಾಟ ಪ್ರಕ್ರಿಯೆ ನಡೆಯಲಿದೆ.
"ಪೀಪಲ್", "ಬೆಟರ್ ಹೋಮ್ ಆಂಡ್ ಗಾರ್ಡನ್" ಮೊದಲಾದ ನಿಯತಕಾಲಿಕಗಳನ್ನುಹೊರತರುವ ಮೆರಿಡಿಕ್ ಸಂಸ್ಥೆ "ಟೈಮ್ಸ್ ಇಂಕ್" ನಾಲ್ಕು ಪತ್ರಿಕೆಗಳನ್ನು ಈ ವರ್ಷ ಮಾರ್ಚ್ ನಲ್ಲಿ ಮಾರಾಟಕ್ಕಾಗಿ ಇಡಲಾಗಿತ್ತು.
ಇನ್ನುಳಿದ ಪತ್ರಿಕೆಗಳಾದ "ಫಾರ್ಚೂನ್", "ಮನಿ" ಮತ್ತು "ಸ್ಪೋರ್ಟ್ಸ್ ಇಲ್ಲುಸ್ಟ್ರೇಟೆಡ್" ಗಳ ಮಾರಾಟ ಸಂಬಂಧ ಮಾತುಕತೆಗಳು ಮುಂದುವರಿದಿದೆ.
"ಟೈಮ್ಸ್ ಮ್ಯಾಗಝಿನ್" ಯೇಲ್ ಯೂನಿವರ್ಸಿಟಿ ಪದವೀಧರರಾದ ಹೆನ್ರಿ ಲೂಸ್ ಹಾಗೂ  ಬ್ರಿಟನ್ ಹ್ಯಾಡೆನ್ ಅವರು ಪ್ರ್ರಂಭಿಸಿದ್ದರು. ಇದು ಮಾರ್ಚ್ 1923 ರಲ್ಲಿ ಪ್ರಕಟಣೆ ಪ್ರಾರಂಭ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com