ಪ್ರಕರಣದ ಆರೋಪಿಗಳು ಪಾಕಿಸ್ತಾನದವರೇ ಆಗಿದ್ದರು ಎಂದು ಮೊದಲ ಬಾರಿಗೆ ನವಾಜ್ ಷರೀಫ್ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಡಾನ್ ಪತ್ರಿಕೆ ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಬಗ್ಗೆ ಪ್ರಶ್ನಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡುವ ವೇಳೆ, ಮುಂಬೈ ದಾಳಿಯ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದರು ಎಂದು ಹೇಳಿದ್ದರು. ಷರೀಫ್ ಹೇಳಿಕೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು.