ಟ್ರಂಪ್ ಜೊತೆ ಮಾತುಕತೆ ನಡೆಸಿದ್ದೀವಿ ಎಂದ ಪಾಕ್: ಇಲ್ಲ, ಬರೀ 'ಹ್ಯಾಂಡ್ ಶೇಕ್' ಅಷ್ಟೇ ಎಂದ ಅಮೆರಿಕಾ

ಪಾಕ್ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಕುರೇಷಿ ಅಮೆರಿಕಾ ಭೇಟಿ ವೇಳೆ ಡೊನಾಲ್ಡ್ ಟ್ರಂಪ್ ಅನೌಪಚಾರಿಕ ಸಭೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಆದರೆ...
ಟ್ರಂಪ್ ಜೊತೆ ಅನೌಪಚಾರಿಕ ಮಾತುಕತೆ ನಡೆಸಿದ್ದೀವಿ-ಪಾಕಿಸ್ತಾನ; ಇಲ್ಲ, ಕೇವಲ ಹಸ್ತಲಾಘವ ನೀಡಿದ್ದಷ್ಟೇ-ಶ್ವೇತ ಭವನ
ಟ್ರಂಪ್ ಜೊತೆ ಅನೌಪಚಾರಿಕ ಮಾತುಕತೆ ನಡೆಸಿದ್ದೀವಿ-ಪಾಕಿಸ್ತಾನ; ಇಲ್ಲ, ಕೇವಲ ಹಸ್ತಲಾಘವ ನೀಡಿದ್ದಷ್ಟೇ-ಶ್ವೇತ ಭವನ
ಪಾಕ್ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಕುರೇಷಿ ಅಮೆರಿಕಾ ಭೇಟಿ ವೇಳೆ ಡೊನಾಲ್ಡ್ ಟ್ರಂಪ್ ಅನೌಪಚಾರಿಕ ಸಭೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಆದರೆ ಅಮೆರಿಕ ಮಾತ್ರ ಅನೌಪಚಾರಿಕ ಮಾತುಕತೆಯನ್ನು ತಳ್ಳಿ ಹಾಕಿದ್ದು, ಕೇವಲ ಹಸ್ತಲಾಘವಕ್ಕೆ ಅಷ್ಟೇ ಇಬ್ಬರ ಭೇಟಿಯೂ ಸೀಮಿತವಾಗಿತ್ತು ಎಂದು ಹೇಳುತ್ತಿದೆ. 
ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಏಕಾಂಗಿಯಾಗಿರುವುದು ಹಾಗೂ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿದ್ದ ಆರ್ಥಿಕ ಸಹಾಯವನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿರುವ ಸಂದರ್ಭದಲ್ಲೇ ನಡೆದಿರುವ ಈ ಘಟನೆ ಅಮೆರಿಕ ಪಾಕಿಸ್ತಾನದೊಂದಿಗೆ ಅಂತರ ಕಾಯ್ದುಕೊಳ್ಳುತ್ತಿರುವುದನ್ನು ಸ್ಪಷ್ಟಗೊಳಿಸುತ್ತಿದೆ. 
ವಿಶ್ವಸಂಸ್ಥೆ ಸಭೆಗೆ ಜಾಗತಿಕ ಮಟ್ಟದ ನಾಯಕರು ನ್ಯೂಯಾರ್ಕ್ ಗೆ ತೆರಳಿದ್ದು, ಪಾಕಿಸ್ತಾನದ ವಿದೇಶಾಂಗ ಸಚಿವರೂ ಸಹ ಅಲ್ಲಿದ್ದಾರೆ. ಇದಕ್ಕೂ ಮುನ್ನ ಭಾರತದೊಂದಿಗೆ ನಿಗದಿಯಾಗಿದ್ದ ದ್ವಿಪಕ್ಷೀಯ ಮಾತುಕತೆ ಮುರಿದುಬಿದ್ದಿದ್ದು ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮುಖಭಂಗ ಉಂಟಾಗಿತ್ತು.  ಈ ನಡುವೆ ಅಮೆರಿಕಾ ಅಧ್ಯಕ್ಷರನ್ನು ಭೇಟಿ ಮಾಡಿ ಅಮೆರಿಕ-ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧದ ಬಗ್ಗೆ ಅನೌಪಚಾರಿಕ ಮಾತುಕತೆ ನಡೆಸಿದ್ದೆವೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಸಚಿವರು ಹೇಳಿದ್ದರು. ಆದರೆ ಪಾಕ್ ವಿದೇಶಾಂಗ ಸಚಿವರ ಹೇಳಿಕೆಗೆ ವ್ಯತಿರಿಕ್ತವಾಗಿ ಶ್ವೇತ ಭವನ ಹೇಳಿಕೆ ನೀಡಿದ್ದು, ಟ್ರಂಪ್- ಪಾಕ್ ವಿದೇಶಾಂಗ ಸಚಿವರ ಭೇಟಿ ಹಸ್ತಲಾಘವಕ್ಕೆ ಅಷ್ಟೇ ಸೀಮಿತವಾಗಿತ್ತು ಎಂದು ಸ್ಪಷ್ಟನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com