ಜಕಾರ್ತಾ: ಇಂಡೋನೇಷಿಯಾದ ಸುಲಾವೆಸಿ ದ್ವೀಪದಲ್ಲಿ ಶುಕ್ರವಾರ ಪ್ರಬಲ ಭೂಕಂಪ ಸಂಭವಿಸಿದ್ದು ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7..5ರಷ್ಟು ದಾಖಲಾಗಿದೆ. ಸೆಂಟ್ರಲ್ ಸುಲಾವೆಸಿ ಪಟ್ಟಣದಿಂದ ಈಶಾನ್ಯಕ್ಕೆ 56 ಕಿ.ಮೀ ದೂರ, 10 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.
ಶುಕ್ರವಾರ ಸಂಭವಿಸಿದ ಎರಡನೇ ಭೂಕಂಪ ಇದಾಗಿದ್ದು ಭೂಕಂಪದಿಂದ ಅನೇಕ ಮನೆಗಳು ಕುಸಿದಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಇಂಡೋನೇಷಿಯಾದ ಪುಲು ನಗರಕ್ಕೆ ಸುನಾಮಿ ಅಪ್ಪಳಿಸಿದೆ ಎಂದು ಸ್ಥಳೀಯ ಟಿವಿ ವಾಹಿನಿ ಸುದ್ದಿ ಪ್ರಸಾರ ಮಾಡಿದೆ. ಪುಲು ನಗರವು 350,000 ಜನಸಂಖ್ಯೆ ಹೊಂದಿದ್ದು ಭೂಕಂಪ ಕೇಂದ್ರದಿಂದ ಸುಮಾರು 80 ಕಿ.ಮೀ. ದೂರವಿದೆ.
ಇಂಡೋನೇಷಿಯಾ ಟಿವಿ ವಾಹಿನಿಯು ಪುಲು ನಗರಕ್ಕೆ ಭೀಕರ ಅಲೆಗಳು ಬಂದು ಅಪ್ಪಳಿಸುತಿರುವ ದೃಶ್ಯಗಳನ್ನು ಪ್ರಸಾರ ಮಾಡಿದ್ದು ಜನರು ಭಯಬೀತಿಯಿಂದ ಓಡುತ್ತಿರುವದನ್ನು ನಾವಲ್ಲಿ ಕಾಣುತ್ತೇವೆ.
Major tsunami reported to have hit Palu, Indonesia after M 7.5 earthquake today, Sept 28! pic.twitter.com/01pQw4oNCB
ಇದಕ್ಕೆ ಮುನ್ನ ಇಂದು ಬೆಳಿಗ್ಗೆ ಸಂಭವಿಸಿದ ಭೂಕಂಪದಲ್ಲಿ 6.1 ತೀವ್ರತೆ ದಾಖಲಾಗಿತ್ತು. ಭೂಕಂಪದಿಂದ ಒಬ್ಬ ವ್ಯಕ್ತಿ ಮೃತಪಟ್ಟು 10 ಜನರಿಗೆ ಗಂಭೀರ ಗಾಯವಾಗಿದೆ.
2004ರಲ್ಲಿ ಇಂಡೋನೇಷಿಯಾ ಸುಮಾತ್ರಾ ದ್ವೀಪದ ಬಳಿ ಸಂಭವಿಸಿದ್ದ ಭೀಕರ ಭೂಕಂಪ (9.1 ತೀವ್ರತೆ) ದಿಂದ ಸುನಾಮಿ ಸೃಷ್ಟಿಯಾಗಿದ್ದು ಭಾರತ ಸೇರಿ ಸುತ್ತ ಮುತ್ತಲ ರಾಷ್ಟ್ರಗಳಲ್ಲಿ ಸುಮಾರು ಎರಡು ಲಕ್ಷ ಮಂದಿ ಸಾವಿಗೀಡಾಗಿದ್ದರು.
ಇನ್ನು ಇಂದು ಸಂಭವಿಸಿದ ಭೂಕಂಪದ ಸ್ಥಳದಿಂದ ಬಹು ದೂರದಲ್ಲಿರುವ ಲೋಂಬೋಕ್ ದ್ವೀಪದಲ್ಲಿ ಇದೇ ಜುಲೈ-ಆಗಸ್ಟ್ ತಿಂಗಳಿನಲ್ಲಿ ಭೂಕಂಪನವಾಗಿದ್ದು ಅದರಲ್ಲಿ ಕನಿಷ್ಟ ೫೦೦ ಮಂದಿ ಮೃತಪಟ್ಟಿದ್ದರು.