ಕೆಲಸ ಸಿಗದೆ ತವರಿಗೆ ಮರಳಿದ್ದ ವ್ಯಕ್ತಿಗೆ ಬಂಪರ್: ಪತ್ನಿಯಿಂದ ಸಾಲ ಪಡೆದು ಲಾಟರಿ ಖರೀದಿಸಿದ್ದವನಿಗೆ 28 ಕೋಟಿ ರೂ.!

ದುಬೈನಲ್ಲಿ ಉದ್ಯೋಗ ಹುಡುಕಲು ವಿಫಲನಾಗಿ ನಿರಾಶೆಯಿಂದ ಮನೆಗೆ ಮರಳಿದ್ದ ಭಾರತೀಯ ರೈತನೊಬ್ಬ ದುಬೈನಲ್ಲಿ ಬರೋಬ್ಬರಿ 28 ಕೋಟಿ ರು.ನ ಲಾಟರಿ ...
ಪತ್ನಿಯಿಂದ ಸಾಲ ಪಡೆದು ಲಾಟರಿ ಖರೀದಿಸಿದ್ದವನಿಗೆ 28 ಕೋಟಿ ರೂ
ಪತ್ನಿಯಿಂದ ಸಾಲ ಪಡೆದು ಲಾಟರಿ ಖರೀದಿಸಿದ್ದವನಿಗೆ 28 ಕೋಟಿ ರೂ
Updated on
ದುಬೈ: ದುಬೈನಲ್ಲಿ ಉದ್ಯೋಗ ಹುಡುಕಲು ವಿಫಲನಾಗಿ ನಿರಾಶೆಯಿಂದ ಮನೆಗೆ ಮರಳಿದ್ದ ಭಾರತೀಯ ರೈತನೊಬ್ಬ ದುಬೈನಲ್ಲಿ ಬರೋಬ್ಬರಿ 28 ಕೋಟಿ ರು.ನ ಲಾಟರಿ ಗೆದ್ದುಕೊಂಡಿದ್ದಾನೆ.
ನಿಜಾಮಾಬಾದ್‌ನ ರೈತ ತನ್ನ ಹೆಂಡತಿಯಿಂದ  ಸಾಲ ಪಡೆದ ಹಣದಿಂದ ಯುಎಇಯಲ್ಲಿ ಲಾಟರಿ ಟಿಕೆಟ್ ಖರೀದಿಸಿ, 15 ಮಿಲಿಯನ್  ಯುಎಸ್ ಡಾಲರ್ (28 ಕೋಟಿ ರೂ.) ಗೆದ್ದಿದ್ದಾನೆ. ಲಾಟರಿ ಟಿಕೆಟ್‌ನ ಬೆಲೆ 20,000 ರೂ. ಎಂದು ಹೇಳಲಾಗಿದೆ.
ಹೈದರಾಬಾದ್‌ಗೆ ಮರಳಿದ ರಿಕ್ಕಲಾ ವಿಲಾಸ್, ದುಬೈನಲ್ಲಿ ನಡೆದ ಬಿಗ್ ರಾಫೆಲ್ ಡ್ರಾದಲ್ಲಿ 28.43 ಕೋಟಿ ರೂ. ಗೆದ್ದಿದ್ದಾರೆ.
ವರದಿಗಳ ಪ್ರಕಾರ, ನಿಜಾಮಾಬಾದ್ ಜಿಲ್ಲೆಯವರಾದ ರೈತ ರಿಕ್ಕಲಾ ವಿಲಾಸ್ 45 ದಿನಗಳ ಕಾಲ ಯುಎಇಯಲ್ಲಿದ್ದರು ಮತ್ತು ಅವರ ವೀಸಾ ಅವಧಿ ಮುಗಿದ ನಂತರ ಅಲ್ಲಿಂದ ಹಿಂದಿರುಗಿದ್ದರು.  
ಯುಎಇಯಲ್ಲಿ, ಅವರು ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಅವರು ಕೆಲ ಸಮಯ ಚಾಲಕರಾಗಿಯೂ ಕೆಲಸ ಮಾಡಿದರು. 
ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ರವಿ, ರಿಕ್ಕಾಲಾ ಹೆಸರಿನಲ್ಲಿ ಮೂರು ಲಾಟರಿ ಟಿಕೆಟ್‌ಗಳನ್ನು ಪಡೆದಿದ್ದ. ಶನಿವಾರದಂದು ಲಾಟರಿ ಗೆದ್ದಿರುವ ಬಗ್ಗೆ ಯುಎಇಯ ಬಿಗ್‌ ಟಿಕೆಟ್‌ ಲಾಟರಿ ಸಂಸ್ಥೆ ರಿಕ್ಕಾಲಾಗೆ ಮಾಹಿತಿ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com