ಪಾಕಿಸ್ತಾನದ ಲಾಹೋರ್ ನಲ್ಲಿ ಮಹಾರಾಜ ರಂಜಿತ್ ಸಿಂಗ್ ಮೂರ್ತಿ ಧ್ವಂಸ; ಇಬ್ಬರ ಬಂಧನ

19ನೇ ಶತಮಾನದ ಆದಿಭಾಗದಲ್ಲಿ ವಾಯುವ್ಯ ಭಾರತವನ್ನಾಳಿದ ಮಹಾರಾಜ ರಂಜಿತ್ ಸಿಂಗ್ ಮೂರ್ತಿಯನ್ನು ಲಾಹೋರ್ ನಲ್ಲಿ ನಿನ್ನೆ ಇಬ್ಬರು ದುಷ್ಕರ್ಮಿಗಳು ನಾಶಗೊಳಿಸಿದ್ದಾರೆ. 
ಮೂರ್ತಿ
ಮೂರ್ತಿ

ಲಾಹೋರ್: 19ನೇ ಶತಮಾನದ ಆದಿಭಾಗದಲ್ಲಿ ವಾಯುವ್ಯ ಭಾರತವನ್ನಾಳಿದ ಮಹಾರಾಜ ರಂಜಿತ್ ಸಿಂಗ್ ಮೂರ್ತಿಯನ್ನು ಲಾಹೋರ್ ನಲ್ಲಿ ನಿನ್ನೆ ಇಬ್ಬರು ದುಷ್ಕರ್ಮಿಗಳು ನಾಶಗೊಳಿಸಿದ್ದಾರೆ.


9 ಅಡಿ ಎತ್ತರದ ಮಹಾರಾಜ ಮೂರ್ತಿಯನ್ನು ಲಾಹೋರ್ ಕೋಟೆಯಲ್ಲಿ ಕಳೆದ ಜೂನ್ ನಲ್ಲಿ ಮಹಾರಾಜರ 180ನೇ ಪುಣ್ಯತಿಥಿ ಸಂದರ್ಭದಲ್ಲಿ ಅನಾವರಣಗೊಳಿಸಲಾಗಿತ್ತು. ಸಿಖ್ ದೊರೆ ಮೊದಲ ಮಹಾರಾಜ 1839ರಲ್ಲಿ ನಿಧನ ಹೊಂದಿದ್ದರು. ಕಂಚಿನಿಂದ ನಿರ್ಮಿಸಲಾಗಿದ್ದ ಮೂರ್ತಿಯಲ್ಲಿ ಮಹಾರಾಜ ಕುದುರೆಯ ಮೇಲೆ ಕುಳಿತುಕೊಂಡು ಕತ್ತಿಯನ್ನು ಹಿಡಿದುಕೊಂಡು ಸಿಖ್ಖರ ಶೈಲಿಯ ನೋಟ ನಿಜಕ್ಕೂ ಮನಸೂರೆಗೊಳ್ಳುವಂತಿತ್ತು.


ಮೂರ್ತಿಯನ್ನು ಹಾಳುಗೆಡವಿದ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿ ಧರ್ಮನಿಂದನೆ ಕಾನೂನಿನಡಿಯಲ್ಲಿ ಕೇಸು ದಾಖಲಿಸಲಾಗಿದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಈ ವಿಧ್ವಂಸಕ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗಿದೆ.


ಶಂಕಿತರು ಪಾದ್ರಿ ಮೌಲಾನಾ ಖಾದಿಮ್ ರಿಜ್ವಿಯ ತೆಹ್ರೀಕ್-ಲ್ಯಾಬ್‌ಬೈಕ್ ಪಾಕಿಸ್ತಾನ ಸಂಘಟನೆಗೆ ಸೇರಿದವರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com