ಪತ್ರಕರ್ತ ಖಶೋಗ್ಗಿ ಹತ್ಯೆ ಪ್ರಕರಣ: ಸೌದಿ ನ್ಯಾಯಾಲಯದಿಂದ ಐವರಿಗೆ ಮರಣದಂಡನೆ 

ಕಳೆದ ವರ್ಷ ಇಸ್ತಾಂಬುಲ್‌ನ ಸೌದಿ ಕಾನ್ಸುಲೇಟ್‌ನಲ್ಲಿ ಸೌದಿ ಏಜೆಂಟರ ತಂಡವೊಂದರಿಂದ ಹತ್ಯೆಗೀಡಾದ ವಾಷಿಂಗ್ಟನ್ ಪೋಸ್ಟ್ ಅಂಕಣಕಾರ ಜಮಾಲ್ ಖಶೋಗ್ಗಿ ಹತ್ಯ್ ಪ್ರಕರಣ ಸಂಬಂಧ  ಸೌದಿ ಅರೇಬಿಯಾದ ನ್ಯಾಯಾಲಯ ಸೋಮವಾರ ಐದು ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಜಮಾಲ್ ಖಶೋಗ್ಗಿ
ಜಮಾಲ್ ಖಶೋಗ್ಗಿ

ರಿಯಾದ್: ಕಳೆದ ವರ್ಷ ಇಸ್ತಾಂಬುಲ್‌ನ ಸೌದಿ ಕಾನ್ಸುಲೇಟ್‌ನಲ್ಲಿ ಸೌದಿ ಏಜೆಂಟರ ತಂಡವೊಂದರಿಂದ ಹತ್ಯೆಗೀಡಾದ ವಾಷಿಂಗ್ಟನ್ ಪೋಸ್ಟ್ ಅಂಕಣಕಾರ ಜಮಾಲ್ ಖಶೋಗ್ಗಿ ಹತ್ಯ್ ಪ್ರಕರಣ ಸಂಬಂಧ  ಸೌದಿ ಅರೇಬಿಯಾದ ನ್ಯಾಯಾಲಯ ಸೋಮವಾರ ಐದು ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

ಪ್ರಕರಣದಲ್ಲಿ ಭಾಗವಹಿಸಿದ್ದ ಇತರೆ ಮೂವರಿಗೆ  ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಸೌದಿ ಅರೇಬಿಯಾದ ಸರ್ಕಾರಿ ಅಲ್-ಎಖ್ಬರಿಯಾ ಟಿವಿ ಚಾನೆಲ್ ವರದಿ ಮಾಡಿದೆ  ಇದೇ ವೇಳೆ ಅಪರಾಧಿಗಳೆಲ್ಲಾ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

ಈ ಹತ್ಯೆ ಸಂಬಂಧ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ಸೌದಿ ದೊರೆ  ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಸಹ ಆಕ್ರೋಶ ಕೇಳಿಬಂದಿತ್ತು. ಹಲವಾರು ಸೌದಿ ಏಜೆಂಟರು ಆತನಿಗೆ ನೇರವಾಗಿ ಕೆಲಸ ಮಾಡಿಕೊಟ್ಟಿದ್ದಾರೆ ಎಂಬ ಆರೋಪಗಳಿದ್ದವು. ಆದರೆ ಈ ಹತ್ಯೆಗೆ ರಾಜಕುಮಾರ ಮೊಹಮ್ಮದ್‌ಗೆ ಯಾವ ಸಂಬಂಧವಿಲ್ಲ ಎಂದು ಸೌದಿ ಆಡಳಿತ ಆರೋಪವನ್ನು ತಳ್ಳಿ ಹಾಕಿದೆ. ಅಲ್ಲದೆ ಸಲ್ಮಾನ್ ಗೆ ಹಿರಿಯ ಸಲಹೆಗಾರನಾಗಿರುವ ಸೌದ್ ಅಲ್ ಖತಾನಿ ಹಾಗೂ ಅಸರಿ ಅವರನ್ನು ಸಾಕ್ಷಾಧಾರ ಕೊರತೆಯ ಕಾರಣ ಪ್ರಕರಣದಿಂದ ಬಿಡುಗಡೆ ಂಆಡಲಾಗಿದೆ.

ಖಶೋಗ್ಗಿ ಹತ್ಯೆ ಪೂರ್ವನಿಯೋಜಿತ ಕೃತ್ಯವಲ್ಲ ಎಂದು ಪ್ರಾಸಿಕ್ಯೂಷನ್ ಹೇಳಿಕೆ ನೀಡಿದೆ. 

ತೀರ್ಪುಗಳನ್ನು ಅಟಾರ್ನಿ ಜನರಲ್ ಕಚೇರಿಯ ವಕ್ತಾರರಾದ ಶಾಲನ್ ಅಲ್-ಶಾಲನ್ ಅವರು ಓದಿದರು ಮತ್ತು ರಾಷ್ಟ್ರೀಯ ಸುದ್ದಿವಾಹಿನಿಯಲ್ಲಿ ಪ್ರಸಾರ ಮಾಡಲಾಗಿದೆ.

 ಜಮಾಲ್ ಖಶೋಗ್ಗಿಗಿ ಅವರು ಅಕ್ಟೋಬರ್ 2018 ರಲ್ಲಿ ಬೆಳಿಗ್ಗೆ ಇಸ್ತಾಂಬುಲ್‌ನಲ್ಲಿರುವ ತಮ್ಮ ದೇಶದ ದೂತಾವಾಸಕ್ಕೆ ಕಾಲಿಟ್ಟಿದ್ದರು, ಅವರ ಟರ್ಕಿಯ ನಿಶ್ಚಿತ ವಧು ಹ್ಯಾಟಿಸ್ ಸೆಂಗಿಜ್ ಅವರನ್ನು ಮದುವೆಯಾಗಲು ಅವಕಾಶ ನೀಡುವ ದಾಖಲೆಗಳನ್ನು ಸಂಗ್ರಹಿಸಲು ಅವರು ಹೊರಗೆ ಕಾಯುತ್ತಿದ್ದರು. ಆದರೆ ಅವರು ಹತ್ಯೆಯಾಗಿದ್ದು ಅವರ ಮೃತದೇಹ ಸಹ ಎಲ್ಲಿಯೂ ಪತ್ತೆಯಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com