ಮಂಗಳ ಗ್ರಹಕ್ಕೆ ಹೋಗಿಬರಲು ಹಿಂದಿರುಗಲು 100,000 ಡಾಲರ್ ಗಿಂತ ಕಡಿಮೆ ಹಣ ಸಾಕು: ಎಲಾನ್ ಮಸ್ಕ್

ಯಾ: ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ಮಾನವನಿಗೆ ಬಾಹ್ಯಾಕಾಶ ಪ್ರವಾಸ ಸೌಕರ್ಯ ಒದಗಿಸುವ ಸಂಬಂಧ ಹಗಲಿರುಳು ಶ್ರಮವಹಿಸುತ್ತಿದೆ.
ಎಲಾನ್ ಮಸ್ಕ್
ಎಲಾನ್ ಮಸ್ಕ್
Updated on
ಕ್ಯಾಲಿಫೋರ್ನಿಯಾ: ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ಮಾನವನಿಗೆ ಬಾಹ್ಯಾಕಾಶ ಪ್ರವಾಸ ಸೌಕರ್ಯ ಒದಗಿಸುವ ಸಂಬಂಧ ಹಗಲಿರುಳು ಶ್ರಮವಹಿಸುತ್ತಿದೆ. ಇದೀಗ ಮಸ್ಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಾಮಾನ್ಯವಾಗಿ ಈ ಬಾಹ್ಯಾಕಾಶ ಪ್ರವಾಸಕ್ಕೆ ತಗುಲುವ ವೆಚ್ಚದ ಬಗ್ಗೆ ಬರೆದುಕೊಂಡಿದ್ದಾರೆ.
ಮಾನವ ತನ್ನ ಜೀವಿತಾವಧಿಯಲ್ಲಿ ಮಂಗಳ ಯಾತ್ರೆ ಕೈಗೊಳ್ಲಲು ಎಷ್ಟು ಖರ್ಚಾಗಲಿದೆ ಎನ್ನುವ್ದನ್ನು ಅವರು ಬಹಿರಂಗಪ್ಡಿಸಿದ್ದಾರೆ.
ಚಂದ್ರ ಅಥವಾ ಮಂಗಳ ಗ್ರ್ಹಕ್ಕೆ ಪ್ರವಾಸ ಕೈಗೊಳ್ಳುವ ಟ್ಕಿಎಟ್ ದರ ಎಷ್ತಾಗಲಿದೆ ಎಂಬ ಪ್ರಶ್ನೆಗೆ ಮಸ್ಕ್ ಉತ್ತರಿಸಿಟಿಕೆಟ್ ದರ, ವೆಚ್ಚವು ಅದರ ಪರಿಮಾಣದ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.ಆದಾಗ್ಯೂ, ಮಂಗಳಕ್ಕೆ ತೆರಳಲು 500,000 ಅಮೆರಿಕನ್ ಡಾಲರ್ ಗಿಂತ ಕಡಿಮೆ ವೆಚ್ಚ ತಗುಲಲಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಅಲ್ಲಿಂದ ಮರಳಲು  100,000  ಅಮೆರಿಕನ್ ಡಾಲರ್ ಗಿಂತ ಕಡಿಮೆಯೂ ಆಗಿರಬಹುದು. ಇದರಲ್ಲಿ ಉಚಿತ ರಿಟರ್ನ್ ಟಿಕೆಟ್ ಸಹ ಸೇರಿರಲಿದೆ.
ಮುಂದುವರಿದ ಆರ್ಥಿಕತೆಯಲ್ಲಿರುವ ಜನರು ಭೂಮಿಯಲ್ಲಿರುವ ತಮ್ಮ ಮನೆಗಳನ್ನು ಮಾರಾಟ ಮಾಡಿ ತಾವು ಕೆಂಪು ಗ್ರಹಕ್ಕೆ ತೆರಳಿ ಅಲ್ಲಿ ವಾಸಿಸಲು ಬಯಸಬಹುದು. ಏಕೆಂದರೆ ಅದರ ವೆಚ್ಚ ಇಲ್ಲಿಗಿಂತ ಕಡಿಮೆ ಬೀಳಲಿದೆ ಎಂದು ಮಸ್ಕ್ ಹೇಳುತ್ತಾರೆ.
ಮಂಗಳ ಗ್ರಹಕ್ಕೆ ಚಲಿಸುವ ಮಹತ್ವಾಕಾಂಕ್ಷೆಯ ಉದ್ದೇಶ ಒಂದೆಡೆಯಾಗಿದ್ದರೆ ಮಸ್ಕ್ ಹಾಗೂ ಅವರ ತಂಡ ಭೂಮಿಗೆ ಪರ್ಯಾಯವಾಗಿ ಚಂದ್ರನಲ್ಲಿಮಾನವ ನಿವಾಸ ನಿರ್ಮಾನಾವನ್ನು ನಿಜವಾಗಿಸಲು ಆದ್ಯತೆ ನೀಡುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com