ಗಡಿ ಗೋಡೆ ನಿರ್ಮಾಣಕ್ಕೆ ಅಮೆರಿಕದಲ್ಲಿ ತುರ್ತುಪರಿಸ್ಥಿತಿ ಘೋಷಣೆ: ಟ್ರಂಪ್ ವಿರುದ್ಧ 16 ರಾಜ್ಯಗಳು ಮೊಕದ್ದಮೆ

ಮೆಕ್ಸಿಕೋ ಗಡಿಯಲ್ಲಿ ಅಕ್ರಮ ತಡೆಯುವ ಸಲುವಾಗಿ ಗೋಡೆ ನಿರ್ಮಿಸಲು ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನಿರ್ಧಾರ ವಿರೋಧಿಸಿ 16 ರಾಜ್ಯಗಳು ಮೊಕದ್ದಮೆ ಹೂಡಿದ್ದು,
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ಸ್ಯಾನ್ ಫ್ರಾನ್ಸಿಸ್ಕೋ: ಮೆಕ್ಸಿಕೋ  ಗಡಿಯಲ್ಲಿ  ಅಕ್ರಮ ತಡೆಯುವ ಸಲುವಾಗಿ ಗೋಡೆ ನಿರ್ಮಿಸಲು ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನಿರ್ಧಾರ ವಿರೋಧಿಸಿ 16 ರಾಜ್ಯಗಳು ಮೊಕದ್ದಮೆ ಹೂಡಿದ್ದು, ಇದು ಸಂವಿಧಾನದ ಉಲ್ಲಂಘನೆ ಎಂದು ಹೇಳಿವೆ.

ಗೋಡೆ ನಿರ್ಮಾಣಕ್ಕೆ ಮಂಡಿಸಿದ್ದ 5. 6 ಬಿಲಿಯನ್ ಡಾಲರ್  ಅಂದಾಜು ವೆಚ್ಚಕ್ಕಿಂತ ಕಡಿಮೆ ಹಣಕ್ಕೆ ಅಮೆರಿಕಾ ಕಾಂಗ್ರೆಸ್  ಅನುಮೋದನೆ ನೀಡಿದೆ.  ಆದರೆ, ಇದನ್ನು ಮೀರಿ ಹೆಚ್ಚಿನ ಹಣ ವೆಚ್ಚ ಮಾಡುವುದಾಗಿ ಟ್ರಂಪ್ ಹೇಳಿಕೆ ನೀಡಿದ್ದರು.

ಆದರೆ, ಕ್ಯಾಲಿಪೋರ್ನಿಯಾದ ಫೆಡರಲ್ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಲಾಗಿದ್ದು, ಟ್ರಂಪ್ ಆದೇಶವು ಸಂವಿಧಾನದ ನಿರೂಪಣೆ ಮತ್ತು ವಿನಿಯೋಗ ಷರತ್ತುಗಳಿಗೆ ವ್ಯತಿರಿಕ್ತವಾಗಿದೆ.ಸಾರ್ವಜನಿಕ ಹಣವನ್ನು ಬಳಕೆಯಲ್ಲಿ ಕಾಂಗ್ರೆಸ್ ನಿರ್ಧಾರವೇ ಅಂತಿಮವಾಗಲಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕ್ಯಾಲಿಪೋರ್ನಿಯಾ ಅಟಾರ್ನಿ ಜನರಲ್  ಕ್ಸೇವಿಯರ್ ಬೆರ್ರಾ, ರಕ್ಷಣಾ ಯೋಜನೆಗಳು, ವಿಪತ್ತು ಪರಿಹಾರ ಮತ್ತಿತರ ಉದ್ದೇಶಗಳಿಗಾಗಿ ಅಪಾರ ಪ್ರಮಾಣದ ವೆಚ್ಚವಾಗಿರುವುದರಿಂದ ತನ್ನ ರಾಜ್ಯ ಹಾಗೂ ಇತರರು ಕಾನೂನಿಗೆ ಬದ್ಧವಾಗಿರುವುದಾಗಿ ಈಗಾಗಲೇ ಹೇಳಿದ್ದಾರೆ.
ಸಾಂವಿಧಾನಿಕ ಬಿಕ್ಕಟ್ಟು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com