ನೇಪಾಳ: ಹೆಲಿಕಾಪ್ಟರ್ ಅವಘಡ, ಪ್ರವಾಸೋದ್ಯಮ ಸಚಿವ ಸೇರಿ 7 ಜನ ದುರ್ಮರಣ

ಪಾಳ ಪ್ರವಾಸೋದ್ಯಮ ಸಚಿವ ರಬೀಂದ್ರಾ ಅಧಿಕಾರಿ ಸೇರಿ ಏಳು ಮಂದಿ ಹೆಲಿಕಾಪ್ಟರ್ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ ಎಂದು ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ರಬೀಂದ್ರಾ ಅಧಿಕಾರಿ
ರಬೀಂದ್ರಾ ಅಧಿಕಾರಿ
ಕಠ್ಮಂಡು(ನೇಪಾಳ): ನೇಪಾಳ ಪ್ರವಾಸೋದ್ಯಮ ಸಚಿವ ರಬೀಂದ್ರಾ ಅಧಿಕಾರಿ  ಸೇರಿ ಏಳು ಮಂದಿ ಹೆಲಿಕಾಪ್ಟರ್ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ ಎಂದು ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ನೇಪಾಳದ ಟೆಹ್ರಾಥೂಮ್ ಎಂಬ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದ್ದು  ನೇಪಾಳದ ನಾಗರಿಕ ವಿಮಾನಯಾನ ಅಧಿಕಾರಿಗಳು ಈ ಸಂಬಂಧ ಹೇಳಿಕೆ ನಿಡಿದ್ದಾರೆ.
ಅಪಘಾತದಲ್ಲಿ ಸಚಿವ ಅಧಿಕಾರಿ, , ಏರ್ ಲೈನ್ಸ್ ಉದ್ಯಮಿ ಆ್ಯಂಗ್ ತ್ಸೆರಿಂಗ್ ಶೆರ್ಪಾ, ಯುವರಾಜ್ ದಹಾಲ್ ಹಾಗೂ ಪೈಲಟ್ ಹಾಗೂ ಇನ್ನೂ ಕೆಲವರು ಸೇರಿ ಒಟ್ಟಾರೆ ಏಳು ಮಂದಿ ಸಾವಿಗೀಡಾಗಿದ್ದಾರೆ. ಇವರೆಲ್ಲರೂ ಏರ್ ಡೈನಾಸ್ಟಿ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು.
ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಇದ್ದಕ್ಕಿದ್ಸಂತೆ ನಾಪತ್ತೆಯಾಗಿದ್ದು ಕೆಲ ಕ್ಷಣಗಳಲ್ಲಿಏ ನೇಪಾಳದ ಪಾಥಿಬಾರಾ ಪ್ರದೇಶದಲ್ಲಿ ಅಪಘಾತವಾಗಿರುವ ಸುದ್ದಿ ದೃಢಪಟ್ಟಿದೆ. ಅಪಘಾತದ ಸ್ಥಳದಲ್ಲಿ ದೊಡ್ಡ ಬೆಂಕಿ ಹೊತಿಕೊಂಡಿದ್ದು ಹೆಲಿಕಾಪ್ಟರ್ ಸಂಪೂರ್ಣ ಸುಟ್ಟು ಹೋಗಿರುವ ಕುರಿತು ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರವಾಸೋದ್ಯಮ ಸಚಿವರು ಇತರೆ ಅಧಿಕಾರಿಗಳೊಡನೆ ಪಾಥಿಬಾರಾ ದೇವಸ್ಥಾನಕ್ಕೆ ತೆರಳಿರಬಹುದು ಇಲ್ಲವೇ ಚುಹಾನ್ ದಾಂಡಾ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆಗಾಗಿ ಹೋಗಿರಬಹುದು ಎಂದು ವರದಿಯಾಗಿದೆ.
ಈ ನಡುವೆ ಘಟನೆ ಬಳಿಕ ನೇಪಾಳ ಪ್ರಧಾನಿ ತುರ್ತು ಸಭೆ ನಡೆಸಿದ್ದು ಸೂಕ್ತ ತನಿಖೆಗೆ ಆದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com