ನಾವು ಯುದ್ಧದ ಮೂಡ್ ನಲ್ಲಿದ್ದೇವೆ, ಮುಂದಿನ 72 ಗಂಟೆ ನಿರ್ಣಾಯಕ: ಪಾಕ್ ರೈಲ್ವೆ ಸಚಿವ

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡುವ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಅಹಮ್ಮದ್ ಅವರು, ಮುಂದಿನ 72 ಗಂಟೆಗಳು ನಿರ್ಣಾಯಕ...
ಶೇಖ್ ರಶೀದ್ ಅಹಮ್ಮದ್
ಶೇಖ್ ರಶೀದ್ ಅಹಮ್ಮದ್
ಇಸ್ಲಾಮಾಬಾದ್: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡುವ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಅಹಮ್ಮದ್ ಅವರು, ಮುಂದಿನ 72 ಗಂಟೆಗಳು ನಿರ್ಣಾಯಕ ಮತ್ತು ಭಾರತ - ಪಾಕ್ ನಡುವೆ ಯುದ್ಧ ನಡೆದರೆ, ಅದು ಎರಡನೇ ವಿಶ್ವ ಸಮರಕ್ಕಿಂತಲೂ ದೊಡ್ಡದಾಗಿರುತ್ತದೆ ಎಂದು ಬುಧವಾರ ಹೇಳಿದ್ದಾರೆ.
ಪಾಕಿಸ್ತಾನ ಬಹುತೇಕ ಯುದ್ಧದ ಮೂಡ್ ನಲ್ಲಿದೆ ಮತ್ತು ಯುದ್ಧಕ್ಕೆ ಸಂಪೂರ್ಣ ಸಿದ್ಧವಾಗಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ. ಅಲ್ಲದೆ ಪಾಕ್ ರೈಲ್ವೆಗೆ ತುರ್ತು ಪರಿಸ್ಥಿತಿಯ ಕಾನೂನನ್ನು ಪಾಲಿಸುತ್ತಿದ್ದಾರೆ ಎಂದಿದ್ದಾರೆ.
ಭಾರತ ಪಾಕ್ ನಡುವೆ ಯುದ್ಧ ನಡೆದರೆ ಅದು ಎರಡನೇ ವಿಶ್ವ ಸಮರಕ್ಕಿಂತ ದೊಡ್ಡದಾಗಿರುತ್ತದೆ ಮತ್ತು ಅದೇ ಕೊನೆಯ ಯುದ್ಧವಾಗಲಿದೆ ಎಂದು ಶೇಖ್ ರಶೀದ್ ಅವರು ಹೇಳಿರುವುದಾಗಿ ದುನ್ಯಾ ಟಿವಿ ವರದಿ ಮಾಡಿದೆ.
ಇತ್ತೀಚಿಗಷ್ಟೆ ಪಾಕ್ ರೈಲ್ವೆ ಸಚಿವ, ಯಾರಾದರೂ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ಅವರ ಕಣ್ಣು ಕೀಳುತ್ತೇವೆ ಎಂದಿದ್ದರು.
ನಾವು ಬಳೆ ತೊಟ್ಟುಕೊಂಡಿಲ್ಲ. ಪಾಕಿಸ್ತಾನವನ್ನು ಕೊಳಕು ಕಣ್ಣಿನಿಂದ ನೋಡಿದರೆ, ಅವರ ಕಣ್ಣು ಕಿತ್ತು ಹಾಕುತ್ತೇವೆ. ನಂತರ ಹಲ್ಲು. ಪಾಕಿಸ್ತಾನ ಮುಸ್ಲಿಮರ ದೇಶ. ಇಡೀ ವಿಶ್ವದ ಮುಸ್ಲಿಮರು ಪಾಕಿಸ್ತಾನವನ್ನು ನೋಡುತ್ತಿದ್ದಾರೆ. ಇಮ್ರಾನ್ ಖಾನ್ ನೇತೃತ್ವದಲ್ಲಿ 20 ಕೋಟಿ ಜನರು ಸಿದ್ಧವಾಗಿದ್ದಾರೆ. ಶಾಂತಿಯಿರಲಿ, ಯುದ್ಧವಿರಲಿ ನಾವು ಇಮ್ರಾನ್ ಬೆಂಬಲಕ್ಕಿದ್ದೇವೆ' ಎಂದು ಶೇಖ್ ರಶೀದ್ ಅಹಮ್ಮದ್ ವಿಡಿಯೋದಲ್ಲಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com