ಭಾರತೀಯ ವಾಯುಸೇನೆ
ಭಾರತೀಯ ವಾಯುಸೇನೆ

ಐಎಎಫ್ ಏರ್ ಸ್ಟ್ರೈಕ್: ಪಾಕಿಸ್ತಾನಿಯರು ಹೆಚ್ಚು ಗೂಗಲ್ ಸರ್ಚ್ ಮಾಡಿದ್ದು ಯಾವ ವಾಯುಸೇನೆ ಕುರಿತು ಗೊತ್ತ?

ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ಗೆ ಪಾಕಿಸ್ತಾನ ಪತರುಗುಟ್ಟಿ ಹೋಗಿದೆ. ಅಲ್ಲದೆ ಪಾಕಿಸ್ತಾನದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು ಈ ಮಧ್ಯೆ...
ಇಸ್ಲಾಮಾಬಾದ್: ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ಗೆ ಪಾಕಿಸ್ತಾನ ಪತರುಗುಟ್ಟಿ ಹೋಗಿದೆ. ಅಲ್ಲದೆ ಪಾಕಿಸ್ತಾನದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು ಈ ಮಧ್ಯೆ ಪಾಕಿಸ್ತಾನಿಯರು ಮಾತ್ರ ಪಾಕಿಸ್ತಾನಕ್ಕಿಂತ ಹೆಚ್ಚು ಭಾರತೀಯ ವಾಯುಸೇನೆಯ ಬಗ್ಗೆ ಹೆಚ್ಚು ಗೂಗಲ್ ಸರ್ಚ್ ಮಾಡಿದ್ದಾರೆ.
ಪಾಕಿಸ್ತಾನದ ಬಾಲಾಕೋಟ್ ನಲ್ಲಿದ್ದ ಜೈಷ್ ಎ ಮೊಹಮ್ಮದ್ ಬಹುದೊಡ್ಡ ಕ್ಯಾಂಪ್ ಅನ್ನು ಭಾರತೀಯ ವಾಯುಸೇನೆಯ ಮೂರನೇ ಬಲಿಷ್ಠ ಯುದ್ಧ ವಿಮಾನ ಮಿರಾಜ್-2000 ಬರೋಬ್ಬರಿ 1000 ಕೆಜಿ ಬಾಂಬ್ ಅನ್ನು ಸಿಡಿಸಿತ್ತು. ಪರಿಣಾಮ ಬರೋಬ್ಬರಿ 350ಕ್ಕೂ ಹೆಚ್ಚು ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂಬ ಮಾತುಗಳು ವ್ಯಕ್ತವಾಗುತ್ತಿದೆ. 
ಇನ್ನು ಪಾಕ್ ನೆಲದಲ್ಲಿ ಭಾರತೀಯ ವಾಯುಸೇನೆ ನಡೆಸಿದ ವಿಧ್ವಂಸಕವನ್ನು ಅರಿಯುವ ಸಲುವಾಗಿ ಪಾಕಿಸ್ತಾನಿಯರು ಪಾಕಿಸ್ತಾನದ ವಾಯುಸೇನೆಗಿಂತ ಭಾರತೀಯ ವಾಯುಸೇನೆ ಬಗ್ಗೆ ಗೂಗಲ್ ನಲ್ಲಿ ಹೆಚ್ಚು ಸರ್ಚ್ ಮಾಡಿದ್ದಾರೆ.
ಪಾಕಿಸ್ತಾನದಲ್ಲಿ ಏರ್ ಸ್ಟ್ರೈಕ್ ನಡೆಸಿದ ಬಳಿಕ ಭಾರತೀಯ ವಾಯುಸೇನೆಯ ಸಾಮರ್ಥ್ಯ ಇಡೀ ಜಗತ್ತಿನ ಗಮನವನ್ನು ಸೆಳೆದಿದೆ. ಪರಿಣಾಮ ಪಾಕಿಸ್ತಾನಿಯರೂ ಪಾಕಿಸ್ತಾನದ ವಾಯುಸೇನೆಗಿಂತ ಭಾರತೀಯ ವಾಯುಸೇನೆ ಕುರಿತು ಹೆಚ್ಚಾಗಿ ಸರ್ಚ್ ಮಾಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com