ದೂರವಾಣಿ ಮೂಲಕ ಮಹತ್ವದ ಮಾತುಕತೆ ನಡೆಸಿದ ಪ್ರಧಾನಿ ಮೋದಿ-ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಜ.07 ರಂದು ದೂರವಾಣಿ ಮೂಲಕ ಮಹತ್ವದ ಮಾತುಕತೆ ನಡೆಸಿದ್ದಾರೆ.
ಮೋದಿ-ಟ್ರಂಪ್
ಮೋದಿ-ಟ್ರಂಪ್
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಜ.07 ರಂದು ದೂರವಾಣಿ ಮೂಲಕ ಮಹತ್ವದ ಮಾತುಕತೆ ನಡೆಸಿದ್ದಾರೆ. 
ಅಫ್ಘಾನಿಸ್ಥಾನದ ಅಭಿವೃದ್ಧಿ ವಿಷಯದಲ್ಲಿ ಪರಸ್ಪರ ಸಹಕಾರ, ವಾಣಿಜ್ಯ ಮೋದಿ-ಟ್ರಂಪ್ ನಡುವಿನ ಮಾತುಕತೆಯ ಪ್ರಮುಖ ವಿಷಯಗಳಾಗಿವೆ. 2019 ರಲ್ಲಿ ಅಮೆರಿಕ-ಭಾರತ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಿಷ್ಠಗೊಳಿಸುವ ಬಗ್ಗೆ ಉಭಯ ನಾಯಕರೂ ಚರ್ಚಿಸಿದ್ದು, ಅಮೆರಿಕ-ಭಾರತದ ನಡುವಿನ ವಾಣಿಜ್ಯ ಅಂತರವನ್ನೂ ಕಡಿಮೆ ಮಾಡುವುದರ ಬಗ್ಗೆ ಮಾತನಾಡಿದ್ದಾರೆ. 
ಅಮೆರಿಕ-ಭಾರತದ ನಡುವೆ ಟ್ರೇಡ್ ಡಿಫಿಸಿಟ್ ನ್ನು ಕೊನೆಗೊಳಿಸಲು ಅಮೆರಿಕ ಭಾರತದಿಂದ ಆಮದು ಮಾಡಿಕೊಳ್ಳುತ್ತಿರುವ ಉಕ್ಕು ಹಾಗೂ ಅಲ್ಯೂಮಿನಿಯಂಗೆ ಹೆಚ್ಚಿನ ತೆರಿಗೆ ವಿಧಿಸಿದ್ದರು. ಈ ಬೆನ್ನಲ್ಲೇ ಭಾರತವೂ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ತೆರಿಗೆ ಹೆಚ್ಚು ವಿಧಿಸುವುದಾಗಿ ಹೇಳಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com