ಭೂಗತ ಪಾತಕಿ ರವಿ ಪೂಜಾರಿಯನ್ನು ಬಂಧಿಸಿದ ಆಫ್ರಿಕನ್ ಪೊಲೀಸರು!

ಭಾರತದ ಕುಖ್ಯಾತ ಭೂಗತಪಾತಕಿ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರವಿ ಪೂಜಾರಿ
ರವಿ ಪೂಜಾರಿ
ನವದೆಹಲಿ: ಭಾರತದ ಕುಖ್ಯಾತ ಭೂಗತಪಾತಕಿ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಫ್ತಾ ವಸೂಲಿ, ಕೊಲೆ ಬೆದರಿಕೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ರವಿ ಪೂಜಾರಿ ಸಿಸಿಬಿಯ ಹಿಟ್ ಲಿಸ್ಟ್ ನಲ್ಲಿ ಅಗ್ರ ಸಾಲಿನಲ್ಲಿದ್ದನೆನ್ನಲಾಗಿದೆ. ರಿಮೋಟ್ ರೌಡಿಸಂ ನಡೆಸಿದ ಮೊದಲ ಭೂಗತ ಪಾತಕಿ ಎಂಬ ಕುಖ್ಯಾತಿಯೂ ರವಿ ಪೂಜಾರಿಗಿದೆ. ಇಂಟರ್ ಪೋಲ್ ನಿಂದಲೂ ಪೂಜಾರಿ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ನೀಡಲಾಗಿತ್ತು.
ಕರ್ನಾಟಕ, ಮಹಾರಾಷ್ಟ್ರ ರಾಜ್ಯದ ಹಲವೆಡೆ ರವಿ ಪೂಜಾರಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಕೆಲ ದಿನಗಳ ಹಿಂದಷ್ಟೇ ಮುಂಬೈ ಪೊಲೀಸರು ರವಿ ಪೂಜಾರಿ ಗ್ಯಾಂಗ್ ನ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದರು. 
ರವಿ ಪೂಜಾರಿ ಬರೋಬ್ಬರಿ 15 ವರ್ಷಗಳಿಂದ ಬೇರೆ ಬೇರೆ ದೇಶಗಳಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಇಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ರವಿ ಪೂಜಾರಿ ಬಂಧನಕ್ಕೆ ಭಾರತ ಸರ್ಕಾರ ಪಶ್ಚಿಮ ಆಫ್ರಿಕಾ ದೇಶದವಾದ ಸೆನೆಗಲ್ ನೊಂದಿಗೆ ಸಂಪರ್ಕದಲ್ಲಿತ್ತು ಎನ್ನಲಾಗಿದ್ದು ಸಿಸಿಬಿಯ ಹಿಟ್ ಲಿಸ್ಟ್ ನಲ್ಲಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com